ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ದಚಿತ್ರಕ್ಕೆ ನಿರಾಕರಣೆ ಇದೊಂದು ಮಲತಾಯಿ ಧೋರಣೆ- ಸಂಸದ ಡಿ.ಕೆ ಸುರೇಶ್ ಕಿಡಿ.

ಬೆಂಗಳೂರು,ಜನವರಿ,7,2023(www.justkannada.in):  ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ದಚಿತ್ರಕ್ಕೆ  ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕರ್ನಾಟಕ ತನ್ನದೇ ಆದ ಇತಿಹಾಸ ಹೊಂದಿದೆ. ರಾಜ್ಯ  ಒಳ್ಳೆಯ ಸ್ಥಾನಮಾನ ನೀಡಲಾಗಿತ್ತು. ಆದರೆ ಗಣರಾಜ್ಯೋತ್ಸವಕ್ಕೆ  ಸ್ತಬ್ದಚಿತ್ರಕ್ಕೆ ಅನುಮತಿ ನೀಡದೇ ನಿರಾಕರಿಸಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ.

ಗುಜರಾತ್ ಅನ್ನು ಕೇಂದ್ರವನ್ನಾಗಿ ಮಾಡಿದೆ.  ಏರ್ ಶೋ ವಿಚಾರದಲ್ಲೂ ಗೊಂದಲ ಮಾಡಿದರು. ಇದು  ರಾಜ್ಯಕ್ಕೆ ಮಾಡಿದ ಅಪಮಾಮ  ಇದನ್ನ ಜನ ಸಹಿಸಲ್ಲ.  ಕಾಂಗ್ರೆಸ್ ಕೇಂದ್ರದ ಮೇಲೆ ಒತ್ತಡ ಹೇರಲಿದೆ ಕೇಂಧ್ರ ಸಚಿವರ ಮನೆಗೆ ಘೇರಾವ್ ಹಾಕುವುದಾಗಿ ಡಿ.ಕೆ ಸುರೇಶ್ ಎಚ್ಚರಿಕೆ ನೀಡಿದರು.

Key words: Rejection -Karnataka –tablo- Republic Day- MP DK Suresh