ಮೈಸೂರು, ಮೇ.೦೮,೨೦೨೫: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಪ್ರೊ.ಎಸ್.ಕೆ.ನವೀನ್ ಕುಮಾರ್ ನೇಮಕಗೊಳಿಸಿ ಆದೇಶ.
ಈ ಸಂಬಂಧ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲರಿಂದ ಅಧಿಕೃತ ಆದೇಶ. ಪ್ರೊ. ನವೀನ್ ಕುಮಾರ್ ಅವರು ಹಾಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಿಜಿಸ್ಟ್ರಾರ್ ವಿರುದ್ಧ ಪ್ರತಿಭಟನೆ:
ಕಳೆದ ಕೆಲದಿನಗಳ ಹಿಂದಷ್ಟೆ ಕೆಎಸ್ ಒಯು ಕುಲಸಚಿವ ಕೆ.ಬಿ.ಪ್ರವೀಣ್ ವಿರುದ್ಧ ವಿವಿ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಿತ್ತು. ಕುಲಸಚಿವರ ಕಚೇರಿ ದ್ವಾರಕ್ಕೆ ನೋಟಿನ ಹಾರ ಹಾಕಿ ಸಿಬ್ಬಂದಿ ಪ್ರತಿಭಟಿಸಿದ್ದರು. ಇದು ಮಾಧ್ಯಮಗಳಲ್ಲಿ ಪ್ರಮುಖ ಸುದ್ಧಿಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದತ್ತು. ಜತೆಗೆ ಸದನದಲ್ಲಿ ಸಹ ಈ ವಿಷಯ ಪ್ರತಿಧ್ವನಿಸಿತ್ತು. ವಿಪಕ್ಷ ನಾಯಕ ಆರ್.ಅಶೋಕ್ ಮಾಧ್ಯಮಗಳ ವರದಿ ಟ್ವೀಟ್ ಮಾಡಿದ್ದು ಸರಕಾರದ ಗಮನ ಸೆಳೆದಿದ್ದರು.
ಈ ಘಟನೆ ಸಂಬಂದ ವಿಶ್ರಾಂತ ಕುಲಪತಿ ಪ್ರೊ. ನಿರಂಜನ್ ನೇತೃತ್ವದಲ್ಲಿ ವಿಚಾರಣೆಗೆ ನೇಮಕ ಮಾಡಲಾಗಿತ್ತು. ಮುಕ್ತ ವಿವಿ ಸಿಬ್ಬಂದಿಗಳ ಆರೋಪದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿದು ವರದಿ ನೀಡಲು ಸರಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರೊ.ನಿರಂಜನ್, ವಿವಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದರು. ಇದೀಗ ರಿಜಿಸ್ಟರ್ ಕೆ.ಬಿ.ಪ್ರವೀಣ್ ರನ್ನು ಎತ್ತಂಗಡಿ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
key words: Prof. S.K. Naveen Kumar, Registrar, KSOU, Mysore
Prof. S.K. Naveen Kumar has been appointed as the new Registrar. KSOU