ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ವಿಜಯಪುರ,ಅಕ್ಟೋಬರ್,19,2021(www.justkannada.in): ನಾನು ಇನ್ನೂ ಎಷ್ಟು ದಿನ ಬದುಕಿರುತ್ತೇನೋ, ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು ಎಂದು ಮಾಜಿ ಪ್ರಧಾನಿ ಎಚ್.​ಡಿ ದೇವೇಗೌಡರು ಹೇಳಿದರು.

ಸಿಂದಗಿ ಉಪ ಚುನಾವಣೆ ಹಿನ್ನೆಲೆ ಚಟ್ಟರಕಿ ಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು, ಇನ್ನು ಎಷ್ಟು ದಿನ ಬದುಕಿರುತ್ತೇನೋ, ದೇವರು ಆಯಸ್ಸು ಕೊಡಬೇಕಷ್ಟೇ. ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು ಎಂದು ನುಡಿದರು.

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ‌ ಅಂಗಡಿ ಪರ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಪ್ರಚಾರ ನಡೆಸಿದರು. ಅವರ ಮನೆಗೂ ಭೇಟಿ ನೀಡಿದ್ದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಅಕ್ಟೋಬರ್ 27ರವರೆಗೆ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಹೆಚ್.ಡಿ ದೇವೇಗೌಡರು, ಮುಸ್ಲಿಂ ಸಮುದಾಯಕ್ಕೆ ನಾವು ಜೂಜಿಗಾಗಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿಲ್ಲ. ನಾನು ಬಿಜೆಪಿ ಏಜೆಂಟ್ ಆಗಿ ಹೆಣ್ಣು ಮಗಳನ್ನು ಬಲಿ ಕೊಡಲು ಬಂದಿಲ್ಲ. ಹಾಗಂತ ಹೇಳುವವರಿಗೆ ದೈವವೇ ಉತ್ತರಿಸುತ್ತದೆ ಎಂದು ಕುಟುಕಿದರು. ತನ್ಮೂಲಕ ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಅಲ್ಪಸಂಖ್ಯಾತ ಸಮಾಜದ ಮಹಿಳೆಗೆ ಟಿಕೆಟ್ ನೀಡಲಾಗಿದೆ ಎಂದು ಜರಿದಿರುವ ಕಾಂಗ್ರೆಸ್ಸಿಗರಿಗೆ ದೇವೇಗೌಡ ಟಾಂಗ್ ಕೊಟ್ಟರು.  ರಾಜಕೀಯ ಸಂಪೂರ್ಣ ಹಾಳಾಗಿ ಹೋಗಿದೆ. ಕೇವಲ ಗೆದ್ದು ಬಂದು ದುಡ್ಡು ಮಾಡೋದಷ್ಟೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Key words: regional party -must remain- if I am dead-  Former Prime Minister -HD Deve Gowda.

‘Regional party should survive even after my death’: Former PM H.D. Devegowda
Vijayapura, October 19, 2021 (www.justkannada.in): “I don’t know how many days I will be alive. But I want the regional party to survive even after my death,” opined former Prime Minister H.D. Devegowda.
He participated in the Sindhagi byelection campaign at Chattaraki village, on behalf of the JDS candidate Nazia Angadi. He also visited her house.
Speaking to the press persons after that, he informed that he would stay in the constituency till October 27 and campaign on behalf of the JDS candidate.
Responding to the press reporters question about the Congress party’s allegations on JDS fielding a minority candidate just to defeat the Congress, he said, “We have not fielded the minority candidate for gambling. I have not come here as a BJP agent to sacrifice the life of a girl. God will answer people who are saying this”. He also added that politics had completely spoilt over the years. He also expressed his displeasure with people who win the elections and engage only in making money.
Keywords: Former PM H.D. Devegowda/ Sindhagi/ byelection/ campaigning