ಎಸ್ ಡಿಪಿಐ ಬ್ಯಾನ್  ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು- ಸಚಿವ ಆರ್.ಅಶೋಕ್ ಹೇಳಿಕೆ…

ಬೆಂಗಳೂರು,ಆ,14,2020(www.justkannada.in):  ಎಎಸ್ ಡಿ ಪಿ ಐ ಸಂಘಟನೆಯೇ ಬೆಂಗಳೂರು ಡಿ.ಜೆ ಹಳ್ಳಿ ಗಲಭೆ ನಡೆಸಿದೆ. ಎಸ್ ಡಿಪಿಐ ಸಂಘಟನೆಯನ್ನು ನಿಷೇಧಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.jk-logo-justkannada-logo

ಮಾಧ್ಯಮದ ಜತೆ ಇಂದು ಮಾತನಾಡಿದ  ಕಂದಾಯ ಸಚಿವ ಆರ್ ಅಶೋಕ್, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಎಸ್ ಡಿ ಪಿ ಐ ಸಂಘಟನೆಯೇ ಗಲಭೆ ನಡೆಸಿದೆ. ಈ ಹಿನ್ನಲೆಯಲ್ಲಿ ಎಸ್ ಡಿ ಪಿ ಐ ಸಂಘಟನೆ ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.Recommend- Center –Ban- SDPI - y Minister -R. Ashok

ಡಿ.ಜೆ.ಹಳ್ಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಿಡಿಗೇಡಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಸಚಿವ ಆರ್.ಅಶೋಕ್, ಪೊಲೀಸರ ಗುಂಡಿಗೆ ಬಲಿಯಾದವರು ಅಮಾಯಕರು ಎಂದು ಕಾಂಗ್ರೆಸ್ ಹೇಳುತ್ತಿದೆ. ಅಮಾಯಕರು ರಾತ್ರಿ 12 ಗಂಟೆ ನಂತರ ಪೊಲೀಸ್ ಠಾಣೆ ಬಳಿ ಯಾಕೆ ಬರುತ್ತಾರೆ. ಕಾಂಗ್ರೆಸ್​ನವರೇ ದಯವಿಟ್ಟು ಈ ಬಗ್ಗೆ ಸಾಕ್ಷಿ ಕೊಡಿ ಎಂದು ಕೇಳಿದರು.

Key words: Recommend- Center –Ban- SDPI – y Minister -R. Ashok