Saturday, August 15, 2026

BDA Apartments

Home Front Page ನಿಜವಾದ ಡೋಂಗಿ ರಾಜಕಾರಣಿ ಯಾರೆಂದು ಅಂತರಾಳವನ್ನ ಕೇಳಿಕೊಳ್ಳಲಿ- ಸಿಎಂ ಸಿದ್ದರಾಮಯ್ಯಗೆ ಸಿಟಿ ರವಿ ತಿರುಗೇಟು.

ನಿಜವಾದ ಡೋಂಗಿ ರಾಜಕಾರಣಿ ಯಾರೆಂದು ಅಂತರಾಳವನ್ನ ಕೇಳಿಕೊಳ್ಳಲಿ- ಸಿಎಂ ಸಿದ್ದರಾಮಯ್ಯಗೆ ಸಿಟಿ ರವಿ ತಿರುಗೇಟು.

ಚಿಕ್ಕಮಗಳೂರು,ಡಿಸೆಂಬರ್,28,2023(www.justkannada.in): ಬಿಜೆಪಿಯವರದ್ದು ಡೋಂಗಿ ಹಿಂದುತ್ವ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯಗೆ  ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಸಿ.ಟಿ ರವಿ, ನಿಜವಾದ ಡೋಂಗಿ ರಾಜಕಾರಣಿ ಯಾರೆಂದು ಕೇಳಿಕೊಳ್ಳಲಿ. ಸಿದ್ದರಾಮಯ್ಯ ತಮ್ಮ ಅಂತರಾಳವನ್ನ ಕೇಳಿಕೊಳ್ಳಲಿ.  ದುಬಾರಿ ವಾಚ್  ಕಟ್ಟಿಕೊಂಡು ಮಜವಾದಿ ಅನ್ನಿಸಿಕೊಂಡವರು,  ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದ್ರೂ ರಾಜೀನಾಮೆ ಇಲ್ಲ. ಬರಗಾಲದಲ್ಲೂ ಐಷರಾಮಿ ಫ್ಲೈಟ್ ನಲ್ಲಿ ಪ್ರಯಾಣಿಸುವವರು.  ಸಚಿವರಾದ ಶಿವಾನಂದ್ ಪಾಟೀಲ್, ಜಮೀರ್ ಅಹ್ಮದ್ ಖಾನ್ ಬಳಿ ರಾಜೀನಾಮೆ ಪಡೆಯದವರು.  ಸಿದ್ದರಾಮಯ್ಯನವರೇ ಡೋಂಗಿ ರಾಜಕಾರಣಿ ಯಾರೆಂದು ಹೇಳಿ  ಎಂದು ಆಕ್ರೋಶ ವ್ಯಕ್ತಪಪಡಿಸಿದರು.

ಕನ್ನಡ ಫಲಕ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆ, ಕರವೇ ಕಾರ್ಯಕರ್ತರ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,   ಕನ್ನಡದ ಆಸ್ಮಿತೆಗಾಗಿ ಹೋರಾಟ ಮಾಡುವುದು ತಪ್ಪಲ್ಲ. ಕನ್ನಡ ಹೋರಾಟಗಾರರ ಬಂಧನ ಸರಿಯಲ್ಲ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.

Key words: real -Dongi politician – CM –Siddaramaiah- CT Ravi