ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ‌ಎಲ್ಲಾ‌  ರೀತಿಯ ನೆರವು ನೀಡಲು ಸಿದ್ಧ-‌ಸಚಿವ ಮುರುಗೇಶ್‌ ಆರ್ ನಿರಾಣಿ‌.

ಬೆಂಗಳೂರು, ಅಕ್ಟೋಬರ್ 12,2021(www.justkannada.in):  ಮಹಿಳೆಯರು ‌ ಸ್ವಂತ ಉದ್ಯಮಗಳನ್ನು ‌ಆರಂಭಿಸಲು ಮುಂದಾದರೆ ಸರ್ಕಾರದಿಂದ ‌ ಎಲ್ಲಾ ‌ರೀತಿಯ ನೆರವು ‌ನೀಡಲು‌ ಸಿದ್ದ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಮುರುಗೇಶ್‌ ಆರ್ ನಿರಾಣಿ‌ ಅವರು ಆಶ್ವಾಸನೆ ‌ನೀಡಿದರು.

ಮಂಗಳವಾರ ಬೆಂಗಳೂರಿನ ‌ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ನಡೆದ ‘ಕೈಗಾರಿಕಾ ‌ಆದಾಲತ್’ ಕಾರ್ಯಕ್ರಮದ ವೇಳೆ ‌ನವೆಂಬರ್ 18 ರಂದು ಅಂತರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದಂದು ನಡೆಯಲಿರುವ ‘ಟುಗೆದರ್ ವಿ ಗ್ರೋ’ ಕಾರ್ಯಕ್ರಮದ ‘ಕೈಪೀಡಿ’ ಬಿಡುಗಡೆ ಮಾಡುವ ಮೂಲಕ ಮಹಿಳಾ ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು.

ಪ್ರತಿಯೊಬ್ಬ ಮಹಿಳಾ ಉದ್ಯಮಿಗಳು ಸ್ವಾವಲಂಬನೆಯಾಗಬೇಕು ಎಂಬುದು ‌ನಮ್ಮ‌ಸರ್ಕಾರದ ಮುಖ್ಯ ‌ಗುರಿಯಾಗಿದೆ.ಕೇಂದ್ರ ಮತ್ತು ‌ರಾಜ್ಯಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ‌ಮಹಿಳಾ ಉದ್ಯಮಿಗಳ ಸಂಘಗಳ (UBUNTU) ಒಕ್ಕೂಟದ ನಿಯೋಗದೊಂದಿಗೆ ಸಂವಾದ ನಡೆಸಿದ ಸಚಿವ ಮುರುಗೇಶ್ ನಿರಾಣಿ, ಅವರು, ಮಹಿಳಾ ಉದ್ಯಮಿಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಿಮ್ಮ ಉದ್ಯಮಕ್ಕೆ ‌ನಮ್ಮ ಇಲಾಖೆಯಿಂದ ‌ಏನೇನು ನೆರವು ಬೇಕೋ ಎಲ್ಲವನ್ನೂ ‌ಒದಗಿಸಲು‌ ಸಿದ್ದ ಎಂದು ‌ವಾಗ್ದಾನ‌ ಮಾಡಿದರು.

“ನಮ್ಮ ಸರ್ಕಾರವು ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ. ನಾವು ಮಹಿಳಾ ಉದ್ಯಮಿಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತೇವೆ. ಜೊತೆಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡುತ್ತೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದು  ಎಂದರೆ,ನಮ್ಮ ಸಮಾಜವನ್ನು ಬಲಗೊಳಿಸಿದಂತೆ ಎಂದು ನಾವು ಭಾವಿಸುತ್ತೇವೆ” ಎಂದರು.

ಮಹಿಳಾ ಉದ್ದಿಮೆದಾರರ ಸಂಘಗಳ UBUNTU ಒಕ್ಕೂಟವು ‌ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯ ಮಾಡಿತ್ತೀರುವುದಕ್ಕೆ‌ ಯಶಸ್ವಿ ಕೈಗಾರಿಕೋದ್ಯಮಿಯೂ ಆಗಿರುವ ಸಚಿವ ಮುರುಗೇಶ್ ನಿರಾಣಿ, ರಾಜ್ಯವು ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ. ಇದು ಉಪಯೋಗವಾದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ‌ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ನೇತೃತ್ವದ UBUNTU ಅನ್ನು ನಾನು ಅಭಿನಂದಿಸುತ್ತೇನೆ, ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ಅವರು ಯಶಸ್ಸನ್ನು ಸಾಧಿಸಲು ಸಹಾಯ ಮಾಡಿದ್ದಾರೆ. ಕರ್ನಾಟಕವು ಮಹಿಳಾ ಉದ್ಯಮಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ‌ತಿಳಿಸಿದರು.

ನಮ್ಮ ಸರ್ಕಾರವು ಕೈಗಾರಿಕೆಗಳನ್ನು ಉತ್ತೇಜಿಸಲು ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳನ್ನು ಒಳಗೊಂಡಂತೆ ಅನೇಕ ರಿಯಾಯಿತಿಗಳನ್ನು ನೀಡುತ್ತದೆ. ನಾವು ಮಹಿಳಾ ಉದ್ಯಮಿಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು.

‘ಟುಗೆದರ್ ವಿ ಗ್ರೋ ಕಾರ್ಯಕ್ರಮ’

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಕೆ ರತ್ನಪ್ರಭಾ, ಮಹಿಳಾ ಉದ್ಯಮಿಗಳ ಒಕ್ಕೂಟದ UBUNTU ಒಕ್ಕೂಟದ ಅಧ್ಯಕ್ಷರು ಇತ್ತೀಚೆಗೆ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮಹಿಳಾ ಉದ್ಯಮಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದ್ದರು.

ಅವರು ನವೆಂಬರ್ 18, 2021 ರಂದು ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದಂದು ಇಲ್ಲಿ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ‘ಟುಗೆದರ್ ವಿ ಗ್ರೋ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ಉದ್ಯಮಿಗಳನ್ನು ಪೋಷಿಸಲು 30 ಕ್ಕೂ ಹೆಚ್ಚು ಸಂಘಗಳು ಮತ್ತು ಅವುಗಳ 13,000 ಸದಸ್ಯರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

Key words: Ready – provide  – assistance -Government – women- entrepreneurs-Minister- Murugesh R Nirani.

ENGLISH SUMMARY….

GOVERNMENT COMMITTED TO HELP, PROMOTE WOMEN ENTREPRENEURS, SAYS MINISTER MURUGESH NIRANI

• Nirani releases brochure on ‘Together We Grow’ event
• Event to be held on Nov 18 to promote women entrepreneurship
• UBUNTU headed by K Ratnaprabha to host the event
• Nirani promises necessary assistance to women entrepreneurs

Bengaluru, October 12: The women entrepreneurs will get all the assistance from the government to compete and excel in the business, promised Large and Medium Industries Minister Murugesh Nirani on Tuesday during ‘Kaigarika Adalat’ at Bengaluru Palace.

The minister assured the women entrepreneurs while releasing a brochure on the upcoming event ‘Together We Grow’ which will be held on the occasion of International Women Entrepreneurship Day on November 18 at a private hotel here.

Interacting with the delegation of UBUNTU Consortium of Women Entrepreneurs Associations, Minister Nirani said the state government is committed to help women entrepreneurs, “Our Government is committed to encourage the spirit of entrepreneurship among the women. We will extend cooperation and support and provide necessary guidance and assistance to women entrepreneurs. We believe that empowering our women is like empowering our society. And I’m glad to note that many women in our state are turning successful entrepreneurs and providing jobs to many particularly women,” Nirani said.

Former Karnataka Chief Secretary K Ratnaprbha, President of UBUNTU Consortium of Women Entrepreneurs Associations had recently met Murugesh Nirani and discussed issues related to women entrepreneurs. They plan to hold ‘Together We Grow’ event on the occasion of International Women Entrepreneurship Day on November 18, 2021 at Hotel Lalit Ashok here.

Chief Minister Basavaraj Bommai will inaugurate the event which is aimed at connecting more than 30 plus associations and their 13,000 members to nurture women entrepreneurs. The event is also aimed at providing a platform for budding women entrepreneurs to meet and interact with successful entrepreneurs so that they can get inspired and get valuable information and guidance to succeed in business. Industries Minister Murugesh R Nirani, Bidyut Behari Swain, Secretary, MSME, Government of India and other dignitaries will attend the event.

Around 400 successful women entrepreneurs from 7 states, industry experts, mentors and market leaders are expected to take part in the ‘Together We Grow’ event.

Praising the UBUNTU Consortium of Women Entrepreneurs Associations for its role in promoting women entrepreneurship and aiding women self-help groups, Minister Murugesh Nirani who is also a successful industrialist, said the state offers excellent opportunities. “I applaud UBUNTU headed by Smt Ratnaprabha for encouraging the spirit of entrepreneurship among the women and helping them achieve success. Karnataka offers excellent opportunities for women entrepreneurs and we are here to encourage and help them. Our government gives many concessions including subsidies and incentives to promote industries. We are committed to assist women entrepreneurs in every possible manner,” minister Nirani assured.