ಸಿಎಂ ಬಿಎಸ್ ವೈ ನನ್ನ ಖಾತೆ ಬದಲಾಯಿಸುವುದಾದ್ರೆ ಖಾತೆ ಬಿಟ್ಟುಕೊಡಲು ನಾನು ಸಿದ್ಧ- ಅರಣ್ಯ ಸಚಿವ ಆನಂದ್ ಸಿಂಗ್…

ಬೆಂಗಳೂರು,ಫೆ,14,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ನನ್ನ ಖಾತೆ ಬದಲಾಯಿಸುವುದಾದ್ರೆ ಖಾತೆ ಬಿಟ್ಟುಕೊಡಲು ನಾನು ಸಿದ್ಧ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಆನಂದ್ ಸಿಂಗ್ ಹೆಸರಿನಲ್ಲಿ ಪ್ರಕರಣಗಳಿವೆ. ಹೀಗಿರುವಾಗ ಅವರಿಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿಪಕ್ಷ ನಾಯಕರು ವ್ಯಂಗ್ಯವಾಡಿದ್ದಾರೆ.

ಹೀಗಾಗಿ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಆನಂದ್ ಸಿಂಗ್ ಸಿಎಂ ಯಡಿಯೂರಪ್ಪ ಒಂದು ವೇಳೆ, ನನ್ನ ಖಾತೆ ಬದಲಾವಣೆ ಮಾಡುವುದಾದರೆ ನಾನು ಒಪ್ಪಿಕೊಳ್ಳಲು ಸಿದ್ದ. ಗ್ರೂಪ್ ಅಫೆನ್ಸ್ ನಲ್ಲಿ ನನ್ನ ವಿರುದ್ದ  ಅರಣ್ಯ ಇಲಾಖೆಯಿಂದ ಕೇಸ್ ಇಲ್ಲ. ಸಿಎಂ ಬಿಎಸ್ ವೈ ಖಾತೆ ಬದಲಾಯಿಸುವುದಾದರೇ ನಾನು ಸಿದ್ಧ. ಸಿಎಂ ಹೇಳೀದ್ರೆ ಅರಣ್ಯ ಖಾತೆ ಬಿಟ್ಟುಕೊಡುತ್ತೇನೆ. ಅರಣ್ಯ ಖಾತೆಗೆ ನಾನು ಬೇಡಿಕೆ ಇಟ್ಟಿರಲಿಲ್ಲ. ಬೇಡಿಕೆ ಇಟ್ಟಿದ್ರೂ ತಪ್ಪೇನು ..? ಎಂದು ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, ಬಳ್ಳಾರಿ ಉಸ್ತವಾರಿಯನ್ನ ಶ್ರೀರಾಮುಲುಗೆ ನೀಡಬೇಕು ಎಂದು ಹಿಂದೆಯೂ ಮನವಿ ಮಾಡಿದ್ದೆ. ಈಗ ನಾನು ಬಳ್ಳಾರಿ ಜಿಲ್ಲೆ ಉಸ್ತುವಾರಿಗೆ ಬೇಡಿಕೆ ಇಟ್ಟಿಲ್ಲ.  ಈಗಲೂ ಶ್ರೀರಾಮುಲುಗೆ ನೀಡಲಿ. ಈ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಆನಂದ್ ಸಿಂಗ್ ತಿಳಿಸಿದರು.

Key words: ready –forest department- replacement- Minister- Anand Singh