ನಾನು ಕೆಂಪಣ್ಣ ವರದಿ ಓದಿದ್ದೇನೆ, ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ-ಸಿದ್ದರಾಮಯ್ಯ ಆರೋಪಕ್ಕೆ  ಸಿಎಂ ಬೊಮ್ಮಾಯಿ ತಿರುಗೇಟು.

ಬೆಂಗಳೂರು,ಫೆಬ್ರವರಿ,25,2023(www.justkannada.in):  ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಸಿದ್ದರಾಮಯ್ಯ ಸುಳ್ಳ ಹೇಳಿದ್ದಾರೆ ನಾನಲ್ಲ. ಕೆಂಪಣ್ಣ ಆಯೋಗದ ವರದಿಯನ್ನ ನಾನು ಓದಿದ್ದೇನೆ. ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ತೆಗೆದುಕಂಡು ಬಂದಿದ್ದಾರೆಂದು ಅವರೇ ಹೇಳಿದ್ದಾರೆ. ಅದನ್ನ ಅನುಮೋದಿಸಿದ್ದೇನೆ ಎಂದು ಬರೆದೆ ಎಂದಿದದಾರೆ.  ಅರ್ಥ  ಏನು ಅವರು ಅಡ್ಮಿಷನ್ ಆದಾಗೆ ಅಲ್ವಾ. ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಸಿದ್ಧರಾಮಣ್ಣ ಕಟುಸತ್ಯ ಎದುರಿಸುವ ಕಾಲ ಬಂದಿದೆ. ಈಗಾಗಲೇ ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Key words: read –Kempanna- report, – CM Bommai – Siddaramaiah-allegation.