Sunday, September 20, 2026

BDA Apartments

`RCB’ ಆಟಗಾರರಿಗೆ ಮೈಸೂರು ಪೇಟಾ ತೊಡಿಸಿ ಸರ್ಕಾರದಿಂದ ಸನ್ಮಾನ BDA JK_Adv BDA Adv
Home Front Page `RCB’ ಆಟಗಾರರಿಗೆ ಮೈಸೂರು ಪೇಟಾ ತೊಡಿಸಿ ಸರ್ಕಾರದಿಂದ ಸನ್ಮಾನ

`RCB’ ಆಟಗಾರರಿಗೆ ಮೈಸೂರು ಪೇಟಾ ತೊಡಿಸಿ ಸರ್ಕಾರದಿಂದ ಸನ್ಮಾನ

ಬೆಂಗಳೂರು,ಜೂನ್,4,2025 (www.justkannada.in):  18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಟ್ರೋಪಿ ಎತ್ತಿ ಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಇದೀಗ ವಿಧಾನಸೌಧದ ಮುಂಭಾಗ ರಾಜ್ಯ ಸರ್ಕಾರ ಸನ್ಮಾನಿಸಿತು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ವೇದಿಕೆಯಲ್ಲಿ ಆರ್ ಸಿಬಿ ತಂಡದ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು.  ಬೆಂಗಳೂರಿಗೆ ಬಂದಿಳಿದ ಆರ್ ಸಿಬಿ ಆಟಗಾರರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದು, ಆರ್ ಸಿಬಿ ಆಟಗಾರರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದಿಸಿದ್ದಾರೆ.

ಈ ವೇಳೆ ರಾಜ್ಯಪಾಲ ವಜುಭಾಯಿವಾಲ ಸೇರಿ ಸಚಿವರು ಉಪಸ್ಥಿತರಿದ್ದರು.  ತಮ್ಮ ನೆಚ್ಚಿನ ಆಟಗಾರರನ್ನ ಕಣ್ತುಂಬಿಕೊಳ್ಳಲು ವಿಧಾನಸೌಧದ ಮುಂಭಾಗ ಸಾವಿರಾರು ಅಭಿಮಾನಿಗಳು ನೆರೆದಿದ್ದರು.vtu

Key  words: RCB players, government, Felicitation