Saturday, September 19, 2026

BDA Apartments

ರಾಜ್ಯ ಗುಪ್ತಚರ ಇಲಾಖೆ ವೈಫಲ್ಯವೆ RCB ಕಾಲ್ತುಳಿತ ದುರ್ಘಟನೆಗೆ ಕಾರಣ BDA JK_Adv BDA Adv
Home Crime ರಾಜ್ಯ ಗುಪ್ತಚರ ಇಲಾಖೆ ವೈಫಲ್ಯವೆ RCB ಕಾಲ್ತುಳಿತ ದುರ್ಘಟನೆಗೆ ಕಾರಣ.

ರಾಜ್ಯ ಗುಪ್ತಚರ ಇಲಾಖೆ ವೈಫಲ್ಯವೆ RCB ಕಾಲ್ತುಳಿತ ದುರ್ಘಟನೆಗೆ ಕಾರಣ.

The failure of the state intelligence department is highlighted in the incident where 12 innocent RCB fans died in a stampede near Chinnaswamy Stadium.

vtu

ಬೆಂಗಳೂರು, ಜೂ.05,2025:  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಸಿಲುಕಿ 12 ಮಂದಿ ಅಮಾಯಕ ಆರ್ಸಿಬಿ ಅಭಿಮಾನಿಗಳು ಮೃತಪಟ್ಟ ಘಟನೆಗೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.

ಹದಿನೆಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಸ್ ನಲ್ಲಿ ವಿಜಯದ ನಗೆ ಬೀರಿತ್ತು. ಈ ಹಿನ್ನೆಲೆಯಲ್ಲಿ ತಂಡದ  ಅಭಿಮಾನಿಗಳ ಹರ್ಷೋಲ್ಲಾಸ ಮೇರೆಮೀರಿತ್ತು. ಈ ನಡುವೆ ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ವಿಜಯೋತ್ಸವ ಮೆರವಣಿಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂಧನ ಸಮಾರಂಭ ನಡೆಸಲು ಕ್ರಿಕೆಟ್ ಅಸೋಸಿಯೇಷನ್ ಮುಂದಾಗಿತ್ತು. ಜತೆಗೆ ರಾಜ್ಯ ಸರಕಾರ ಸಹ ತಾನೇನೂ ಕಮ್ಮಿ ಎಂಬಂತೆ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಬಳಿ ಸನ್ಮಾನ ಕಾರ್ಯಕ್ರಮ ಫಿಕ್ಸ್ ಮಾಡಿತು.

ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸುವ ಸುದ್ಧಿ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಚಾರ ಪಡೆದು ಲಕ್ಷಗಟ್ಟಲೇ ಫ್ಯಾನ್ಸ್ ಗಳನ್ನು ತಲುಪಿ ಸಂಚಲನ ಮೂಡಿಸಿತ್ತು. ಮಂಗಳವಾರ ರಾತ್ರಿಯ ಸೆಲೆಬ್ರೇಷನ್ ಮೂಡ್ ನಿಂದ ಹೊರಬಂದಿರದ ಅಭಿಮಾನಿಗಳು, ಮರುದಿನ ಆಟಗಾರರನ್ನು ಖುದ್ದು ನೋಡುವ ಸುದ್ಧಿಯಿಂದ ಪುಳಕಿತರಾಗಿ ಚಿನ್ನಸ್ವಾಮಿ ಸ್ಟೇಡಿಯಂನತ್ತ ಸಾಗರದಂತೆ ಹರಿದು ಬಂದರು.

ಅವರನ DEAD

ಗುಪ್ತಚರ ವಿಫಲ :

ಐಪಿಎಲ್ ಇತಿಹಾಸ ನೋಡಿದರೆ ತಿಳಿಯುತ್ತದೆ ಆರ್ಸಿಬಿಗೆ ಇರುವ ಕಲ್ಟ್ ಫ್ಯಾನ್ಸ್ ಎಂಥದ್ದು ಎಂಬುದು. ಆದರೆ ಇದನ್ನು ಅರಿಯುವಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಯಿತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಬುಧವಾರ ಸಂಜೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ, ಇಷ್ಟೊಂದು ಪ್ರಮಾಣದಲ್ಲಿ ಆರ್ಸಿಬಿ ಅಭಿಮಾನಿಗಳು ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳುವ ಮೂಲಕ ಇಂಟಲಿಜೆನ್ಸಿ ವೈಫಲ್ಯವನ್ನು ಒಪ್ಪಿಕೊಂಡರು.

ಗುಪ್ತ ಚರ ಮುಖ್ಯಸ್ಥ ಯಾರು..?

1998 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್  ಅವರನ್ನು ಗುಪ್ತಚರ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಗಿ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ರಾಜ್ಯ ಸರಕಾರ ನೇಮಕ ಮಾಡಿ, 1997 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕೆ.ವಿ. ಶರತ್ ಚಂದ್ರ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿತ್ತು.

ನಿಂಬಾಳ್ಕರ್ ಅವರು ಹಿರಿಯ ಕಾಂಗ್ರೆಸ್ ನಾಯಕಿ ಅಂಜಲಿ ನಿಂಬಾಳ್ಕರ್ ಅವರ ಪತಿ, ಅಂಜಲಿ ಅವರು 2023 ರ ವಿಧಾನಸಭೆ ಮತ್ತು 2024 ರ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ವರ್ಗಾವಣೆ ಬಗ್ಗೆ ಆಗ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, “ಗುಪ್ತಚರ ಇಲಾಖೆಯ ಎಡಿಜಿಪಿಯನ್ನು ಬದಲಾಯಿಸುವ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಗುಪ್ತಚರ ಖಾತೆಯನ್ನು ಹೊಂದಿರುವುದರಿಂದ, ಅವರು ಅತ್ಯಂತ ವಿಶ್ವಾಸ ಹೊಂದಿರುವ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ” ಎಂದಿದ್ದರು.

ನಿಂಬಾಳ್ಕರ್ ಅವರು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ  ಆಯುಕ್ತರ ಹುದ್ದೆಯ ಪ್ರಭಾರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ. ಗುಪ್ತಚರ ಇಲಾಖೆಯಂತ ಪ್ರಮುಖ ಹುದ್ದೆಯನ್ನು ಹೊಂದಿರುವ ಅಧಿಕಾರಿಗೆ ವಾರ್ತಾ ಇಲಾಖೆ ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆ ನೀಡಿರುವುದು ಎಷ್ಟು ಸರಿ. ಐಪಿಎಸ್ ಅಧಿಕಾರಿಯನ್ನು ಸರಕಾರದ ಯೋಜನೆಗಳ ಪ್ರಚಾರ ಮತ್ತು ಜಾಹಿರಾತು ನಿರ್ವಹಣೆಗೂ ನಿಯೋಜಿಸುವ ಮೂಲಕ ಕೆಲಸದ ಒತ್ತಡ ಎದುರಿಸುವಂತಾಗಿದೆ. ಪರಿಣಾಮ ಅತ್ತ ಗುಪ್ತಚರ ಇಲಾಖೆಗೂ ಇತ್ತ ವಾರ್ತಾ ಇಲಾಖೆಗೂ ನ್ಯಾಯ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

state intelligence department rcb123

ದಿಢೀರ್ ಆಯೋಜನೆ:

ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮುನ್ನ ಗುಪ್ತಚರ ಇಲಾಖೆ ಮಾಹಿತಿ ನೀಡುವುದು ಕರ್ತವ್ಯ.  ಇಲಾಖೆ ನೀಡುವ ಮಾಹಿತಿ ಮತ್ತು ಶಿಫಾರಸುಗಳನ್ನು ಆಧರಿಸಿಯೇ ಕಾರ್ಯಕ್ರಮದ ಸ್ಥಳ ನಿಗದಿ ನಡೆಸಬೇಕಾಗುತ್ತದೆ.

ಆದರೆ ಗುಪ್ತವರ ಇಲಾಖೆ ಈನಿಟ್ಟಿನಲ್ಲಿ ಯಾವುದೇ ಮುಂಜಾಗ್ರತ ಮಾಹಿತಿ ನೀಡದೆ ಬೇಜಾವ್ದಾರಿ ವರ್ತನೆ ತೋರಿದ ಪರಿಣಾಮ ಈ ಅನಾಹುತ ಸಂಭವಿಸಿದೆ.

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ಬಗ್ಗೆ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡದ  ಕಾರಣ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿರಲಿಲ್ಲ. ಲಕ್ಷಾಂತರ ಜನರು ಕ್ರೀಡಾಂಗಣದತ್ತ ಬಂದಿದ್ದರಿಂದ, ಅವರನ್ನು ನಿಯಂತ್ರಿಸುವುದು ಕಷ್ಟವಾಯಿತು. ಸಂಜೆ 6ರ ನಂತರ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಯಿತು. ಮೊದಲೇ ಮಾಹಿತಿ ನೀಡಿದ್ದರೆ, ಈ ಗಡಿಬಿಡಿಯನ್ನು ತಪ್ಪಿಸಬಹುದಿತ್ತು. ಯಾರನ್ನು ಕ್ರೀಡಾಂಗಣದ ಒಳಗೆ ಬಿಡಬೇಕು, ಯಾರನ್ನು ಬಿಡಬಾರದು ಎಂಬುದರ ಬಗ್ಗೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಒದಗಿಸಿರಲಿಲ್ಲ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವುದು ಗುಪ್ತಚರ ಇಲಾಖೆ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿದೆ.

ಯಾರು ಹೊಣೆ:

ಆರ್ಸಿಬಿ ತಂಡ ರಾಜ್ಯ ರಾಜಧಾನಿಗೆ ಆಗಮಿಸುತ್ತಿರುವ ವಿಷಯ ತಿಳಿದ ಬಳಿಕವೂ ಅಗತ್ಯ ಮುಂಜಾಗ್ರತೆ ವಹಿಸದಿರುವುದು ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯವನ್ನು ಎದ್ದು ತೋರಿಸುತ್ತದೆ. ಬೃಹತ್ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ತಂಡದ ಆಟಗಾರರು ಬರುವಾಗ ಅವರನ್ನು ನೋಡಲು ಅಭಿಮಾನಿಗಳು ಜನಸಾಗರದಂತೆ ಹರಿದು ಬರುತ್ತಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೆ ಗೃಹ ಇಲಾಖೆಗೆ, ಇವರ ನಿರ್ಲಕ್ಷ್ಯದಿಂದ ಒಂದು ವೇಳೆ ಆಟಗಾರರಿಗೇನಾದರು ಹೆಚ್ಚುಕಮ್ಮಿಯಾಗಿದ್ದರೆ ಯಾರು ಹೊಣೆ ಎಂದು ಮೈಸೂರು ಜಿಲ್ಲಾ ವಕೀಲರ ಸಂಘದ ಎಸ್.ಲೊಕೇಶ್ ಆತಂಕ ವ್ಯಕ್ತಪಡಿಸಿದರು.

key words: state intelligence department, 12 innocent RCB fans died, stampede,  Chinnaswamy Stadium.

vtu

SUMMARY:

rcb fans died NIMBALKAR

The failure of the state intelligence department is highlighted in the incident where 12 innocent RCB fans died in a stampede near Chinnaswamy Stadium.