ರೇವ್ ಪಾರ್ಟಿ ಪ್ರಕರಣ; ತೆಲುಗು ನಟಿ ಹೇಮಾ ಅವರಿಗೆ ಜಾಮೀನು ಮಂಜೂರು.

ಬೆಂಗಳೂರು,ಜೂನ್,12,2024 (www.justkannada.in): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ  ತೆಲುಗು ನಟಿ ಹೇಮಾ ಅವರಿಗೆ  ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರೇವ್ ಪಾರ್ಟಿ ಪ್ರಕರಣ ಸಂಬಂಧ ತೆಲುಗು ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟಿ ಹೇಮಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ಬೆಂಗಳೂರಿನ ಎನ್ ಡಿ ಪಿಎಸ್ ವಿಶೇಷ ಕೋರ್ಟ್ ನ ನ್ಯಾಯಾಧೀಶರು ವಿಚಾರಣೆ ನಡೆಸಿದರು.

ಅರ್ಜಿಯ ವಿಚಾರಣೆಯ ಬಳಿಕ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ನಟಿ ಹೇಮಾಗೆ ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎನ್ ಡಿಪಿಎಸ್ ವಿಶೇಷ ಕೋರ್ಟ್ ನಿಂದ ಜಾಮೀನು  ಸಿಕ್ಕಿದೆ.

Key words: Rave, Party, Case, Telugu, actress, Hema, bail