ಆಗಸ್ಟ್ 1ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರಿಗೆ ಮುಕ್ತ

ಬೆಂಗಳೂರು, ಜುಲೈ 24, 2021 (www.justkannada.in):  ಏಪ್ರಿಲ್ ತಿಂಗಳ ಮಧ್ಯಭಾಗದಿಂದ ಸಾರ್ವಜನಿಕರ ಭೇಟಿಗೆ ಬಂದ್ ಆಗಿದ್ದ ರಾಷ್ಟ್ರಪತಿ ಭವನ ಕೊನೆಗೂ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ( RASHTRAPATI BHAVAN) ಮ್ಯೂಸಿಯಂ ಸಂಕೀರ್ಣಕ್ಕೆ ಆಗಸ್ಟ್ 1 ರಿಂದ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್ ವಾರದಲ್ಲಿ ಆರು ದಿನಗಳವರೆಗೂ ( ಮಂಗಳವಾರದಿಂದ ಭಾನುವಾರ) ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಮುಂಚಿತವಾಗಿ ಕಾಯ್ದಿರಿಸಿದ ವೇಳೆಯಲ್ಲಿ ಬೆಳಗ್ಗೆ 9-30ರಿಂದ 11 ಗಂಟೆ, 11-30 ರಿಂದ 13-00 ಗಂಟೆ, 13-30 ರಿಂದ 15-00 ಮತ್ತು 15-30 ರಿಂದ 17-00 ಗಂಟೆ ಅವಧಿಯಲ್ಲಿ ಗರಿಷ್ಠ 50 ಜನರು ಭೇಟಿ ನೀಡಬಹುದಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.