Monday, August 10, 2026

BDA Apartments

Home Cinema ವಿಜಯ್ ದೇವರಕೊಂಡ ಜತೆ ಮದುವೆ: ಮತ್ತೆ ಸ್ಪಷ್ಟನೆ ನೀಡಿದ ರಶ್ಮಿಕಾ !

ವಿಜಯ್ ದೇವರಕೊಂಡ ಜತೆ ಮದುವೆ: ಮತ್ತೆ ಸ್ಪಷ್ಟನೆ ನೀಡಿದ ರಶ್ಮಿಕಾ !

ಬೆಂಗಳೂರು, ಮಾರ್ಚ್ 02, 2021 (www.justkannada.in): ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಪ್ಲಾನ್​ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣರ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತು ಸ್ವತಃ ರಶ್ಮಿಕಾ ಮಾತನಾಡಿದ್ದಾರೆ.

ಇವೆಲ್ಲವು ಒಂದು ಟೈಮ್​ ಪಾಸ್​ ವದಂತಿ. ನಾನು ಮದುವೆಯಾಗಲು ಇನ್ನೂ ಸಾಕಷ್ಟು ಸಮಯವಿದೆ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದಿದ್ದಾರೆ ರಶ್ಮಿಕಾ.

ಮದುವೆ ವದಂತಿಗಳ ಸುದ್ದಿ ವೈರಲ್ ಆದ ನಂತರ, ವಿಜಯ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮೂಲಕ ವದಂತಿಗಳನ್ನು ತಳ್ಳಿಹಾಕಿದರು. ಇದೀಗ ಅದೇ ಮಾತನ್ನು ರಶ್ಮಿಕಾ ಪುನರುಚ್ಚರಿಸಿದ್ದಾರೆ.