ಪ್ರಜ್ವಲ್ ರೇವಣ್ಣ ವಿರುದ್ದ ರೇಪ್ ಕೇಸ್:  ಆ.1ಕ್ಕೆ ತೀರ್ಪು ಮುಂದೂಡಿದ ಕೋರ್ಟ್

ಬೆಂಗಳೂರು,ಜುಲೈ,30,2025 (www.justkannada.in) : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಆದರೆ ಎರಡೂ ಕಡೆಯ ವಕೀಲರಿಂದ ಕೆಲ ಸ್ಪಷ್ಟೀಕರಣ ಕೇಳಿದ ನ್ಯಾಯಾಧೀಶರು ಇಂದು ತೀರ್ಪು ಇಲ್ಲ ಎಂದಿದ್ದಾರೆ. ಆಗಸ್ಟ್ 1ಕ್ಕೆ ತೀರ್ಪನ್ನ ಮುಂದೂಡಿದ್ದಾರೆ. ಸ್ಪಷ್ಟೀಕರಣ ಬೇಕಿದ್ದರಿಂದ ಇಂದು ತೀರ್ಪು ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ತನಿಖಾಧಿಕಾರಿ ಹೇಳಿರುವ ದಿನಾಂಕದಂದು ಮೊಬೈಲ್ ಅವರ ಬಳಿ ಇರಲಿಲ್ಲ ಹೀಗಾಗಿ ಸ್ಯಾಮ್ಸಂಗ್  ಮೊಬೈಲ್ ಫೋನ್ ಸಾಕ್ಷ್ಯಗೆ ಬೆಲೆ ಇಲ್ಲ ಎಂದು  ಪ್ರಜ್ವಲರ ಪರ ವಕೀಲರು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್ ಪಿಪಿ ಜಗದೀಶ್  ಮಹಜರುನಲ್ಲಿ ಮೊಬೈಲ್ ಪಡೆದಿರುವುದು ಸ್ಪಷ್ಟವಾಗಿದೆ ಎಂದರು. ಈ ವೇಳೆ ಕೇವಲ ಸ್ಪಷ್ಟೀಕರಣ ಬೇಕಾಗಿದೆ. ವಾದವಲ್ಲ ಎಂದ ನ್ಯಾಯಾಧೀಶರು ತಿಳಿಸಿದ್ದು ತೀರ್ಪನ್ನು ಆ.1ಕ್ಕೆ ಮುಂದೂಡಿದರು.vtu

Key words: Rape case. Against. Prajwal Revanna, Court, adjourned , judgment