ಸಾಕಷ್ಟು ಚರ್ಚೆಗೆ ಕಾರಣವಾದ ರಣವೀರ್ ಸಿಂಗ್ ‘ನ್ಯೂಡ್ ಫೋಟೋ ಶೂಟ್’ ಭರ್ಜರಿ ಆದಾಯವನ್ನೂ ತಂದಿದೆ!

ಬೆಂಗಳೂರು, ಜುಲೈ 28, 2022 (www.justkannada.in):  ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋ ಶೂಟ್ ಹಲವು ಚರ್ಚೆಗಳನ್ನು ಹುಟ್ಟು ಹಾಕಿತ್ತು. ವಿಶೇಷ ಎಂದರೆ ಇದರಿಂದ ರಣವೀರ್ ಜೇಬಿಗೆ ಸಾಕಷ್ಟು ಗಳಿಕೆ ಬಂದಿದೆ.

ರಣವೀರ್ ಸಿಂಗ್ ಈ ರೀತಿ ಬೆತ್ತಲೆಯಾಗಿ ಕಾಣುತ್ತಿರುವುದು ಹೊಸದೇನಲ್ಲ. ಈ ಹಿಂದೆ ‘ಬೇಫಿಕ್ರೆ’ ಸಿನಿಮಾದಲ್ಲಿ ಸಂಪೂರ್ಣ ನಗ್ನ ದೃಶ್ಯ ಮಾಡಿದ್ದರು. ಫೋಟೊ ಶೂಟ್ ಮಾಡಿದ ಮ್ಯಾಗಜೀನ್ ಸಂಸ್ಥೆ ರಣವೀರ್ ಗೆ ದೊಡ್ಡ ಮೊತ್ತವನ್ನೇ ನೀಡಿದೆ.

ಅಂದಹಾಗೆ ರಣವೀರ್ ನ್ಯೂಡ್  ಕ್ಯಾಮರಾ ಮುಂದೆ ತರಲು 55 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಖ್ಯಾತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅವರು ಈ ರೀತಿಯ ನಗ್ನ ಚಿತ್ರಗಳನ್ನು ಪಡೆಯಲು ರಣವೀರ್ ಸಿಂಗ್ 55 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂಬ ವಿಷಯವನ್ನು ಹೊರಹಾಕಿದ್ದಾರೆ.

ಇನ್ನು  ಸಾವಿರಾರು ಜನರ ಮುಂದೆ ಬಟ್ಟೆ ಇಲ್ಲದೆ ಬರಬಹುದು, ಯಾರು ಎಷ್ಟು ಅವಮಾನಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ರಣವೀರ್ ಹೇಳಿಕೆ ಹಲವರ ಕೋಪಕ್ಕೆ ಗುರಿಯಾಗಿತ್ತು,