ಮಹಿಳೆಯರಿಗಾಗಿ ‘ರಂಗನಾಯಕಿ’ ಸ್ಪೆಷಲ್ ಶೋ !

ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ‘ಗೋವಾ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್-2019’ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ‘ರಂಗನಾಯಕಿ’ ಚಿತ್ರ ಸ್ಥಾನ ಪಡೆದುಕೊಂಡಿದೆ.

ಇದೇ ತಿಂಗಳ 24 ರಂದು ಚಿತ್ರವು ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳಲಿದೆ. ನವೆಂಬರ್ 1 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರವನ್ನು ಮಹಿಳೆಯರಿಗಾಗಿಯೇ ಒಂದು ವಿಶೇಷ ಪ್ರದರ್ಶನವನ್ನು ಚಿತ್ರತಂಡ ಏರ್ಪಡಿಸಿದೆ.

ಈ ಚಿತ್ರವು ತನಗಾದ ಅನ್ಯಾಯದ ವಿರುದ್ಧ ಹುಡುಗಿಯೊಬ್ಬಳು ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿ ನ್ಯಾಯ ಪಡೆಯುತ್ತಾಳೆ ಎಂಬ ಕಥೆಯನ್ನು ಒಳಗೊಂಡಿದೆ.