ಭಾರತದ ಮೊಟ್ಟ ಮೊದಲ ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ರಂಗರಾವ್ ವಿಕಲಚೇತನರ ಸ್ಮಾ ರಕ ಶಾಲೆಯು ಹಳೆಯ ವಿದ್ಯಾರ್ಥಿ ದೀಪಿಕಾ ಆಯ್ಕೆ

0
1

ಮೈಸೂರು, ಏಪ್ರಿ ಲ್ 20 , 2023 (www.justkannada.in): ರಂಗರಾವ್ ವಿಕಲಚೇತನರ ಸ್ಮಾ ರಕ ಶಾಲೆಯು ಹಳೆಯ ವಿದ್ಯಾರ್ಥಿ ಟಿ.ಸಿ.ದೀಪಿಕಾ ಭಾರತದ ಮೊಟ್ಟ ಮೊದಲ ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

17 ಸದಸ್ಯರನ್ನು ಒಳಗೊಂಡಿರುವ ಭಾರತ ತಂಡವು ನೇಪಾಳದಲ್ಲಿ ಮಂಬರುವ T-20 ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಈ ತಂಡಕ್ಕೆ ದೀಪಿಕಾ ಆಯ್ಕೆಯಾಗಿದ್ದಾರೆ.

ದೀಪಿಕಾ ಅವರ ಆಟದ ಬಗ್ಗೆ ಅವರ ಉತ್ಸಾಹ ಅವರನ್ನು ಸರಿಯಾದ ಮಾರ್ಗದರ್ಶಕರ ಬಳಿಗೆ ಕರೆದೂಯಿತು. ಅಚಲವಾದ ಕಠಿಣ ಪರಿಶ್ರಮದ ಮೂಲಕ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ಫೂರ್ತಿದಾಯಕರಾಗಿದ್ದಾರೆ.

ದೀಪಿಕಾ ಅವರ ಸಮರ್ಪಣೆ ಮತ್ತು ಈ ಕನಸನ್ನು ನನಸಾಗಿಸಲು ಅವರು ಪಟ್ಟ ಶ್ರಮವನ್ನು ನಾವು ನೋಡಿದ್ದೇವೆ, ನಮ್ಮ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾವು ನೋಡಿದಾಗ, ನಮ್ಮ ಉಪಕ್ರಮದಿಂದ ನಾವು ಸ್ವಲ್ಪವಾದರೂ ವ್ಯತ್ಯಾಸವನ್ನು ಮಾಡಿದ್ದೇವೆ ಎಂದು ನಮಗೆ ತಿಳಿದಿದೆ. ಇದು ನಮಗೆಲ್ಲರಿಗೂ ಸ್ಪೂರ್ತಿದಾಯಕ ಕಥೆಯಾಗಿದೆ, ಯಾವುದೇ ಕಠಿಣ ಪರಿಶ್ರಮವು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಎನ್ ಆರ್ ಗ್ರೂಪ್ ಅಧ್ಯಕ್ಷ ಗುರು ರಂಗ ಅವರು ದೀಪಿಕಾ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.