Monday, August 24, 2026

BDA Apartments

Home Front Page ಇಂಧನ ದರ ಹೆಚ್ಚಿಸಿ ಕೇಂದ್ರದಿಂದ ಜನರ ಹಣ ಲೂಟಿ-ರಣದೀಪ್ ಸಿಂಗ್ ಸುರ್ಜೇವಾಲ

ಇಂಧನ ದರ ಹೆಚ್ಚಿಸಿ ಕೇಂದ್ರದಿಂದ ಜನರ ಹಣ ಲೂಟಿ-ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಮೇ,25,2026 (www.justkannada.in):  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಗೆ ಬಿಜೆಪಿ ರಿಟರ್ನ್ ಗಿಫ್ಟ್ ನೀಡಿದೆ ಎಂದು ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ ಮಾಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ಡೀಸೆಲ್ ದರ ಏರಿಕೆ ಬಗ್ಗೆ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆ  ಬಿಡುಗಡೆ ಮಾಡಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು.

ಇಂದು ಬೆಳಿಗ್ಗೆ ಬಿಜೆಪಿಯ ಬೆಲೆ ಏರಿಕೆಯ ಬಲೆ.  ಇಂದು 2 .83 ರೂ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗಿದೆ.  11 ದಿನಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ದರ 110 ರೂ ಆಗಿದೆ ಸ್ವಾತಂತ್ರ ಸಿಕ್ಕ ಬಳಿಕ ಮೊಟ್ಟ ಮೊದಲ ಬಾರಿಗೆ ಪೆಟ್ರೋಲ್ ದರ 110 ರೂ ಆಗಿದೆ  ಇಂಧನ ದರ ಹೆಚ್ಚಿಸಿ ಕೇಂದ್ರ ಸರ್ಕಾರ ಹಣ ಲೂಟಿ ಮಾಡಿದೆ. ಕಳೆದ 12 ವರ್ಷಗಳಿಂದ ಕನ್ನಡಿಗರ ಪಿಕ್ ಪಾಕೆಟ್ ಮಾಡುತ್ತಿದೆ . ಇಂಧನ ದರ ಹೆಚ್ಚಿಸಿ ಜನತಗೆ ಬಿಜೆಪಿ ರಿಟರ್ನ್ ಗಿಫ್ಟ್ ನೀಡಿದೆ ಎಂದು ವಾಗ್ದಾಳಿ ನಡೆಸಿದರು.

Key words: BJP, gift, people, increasing, fuel prices,  Randeep Singh Surjewala