ರಾಜ್ಯಕ್ಕೆ ಅನ್ಯಾಯ: ಕೇಂದ್ರದ ಗಮನ ಸೆಳೆಯಲು ಸಿಎಂ.ಡಿಸಿಎಂ ದೆಹಲಿ ಭೇಟಿ- ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಜುಲೈ,9,2025 (www.justkannada.in): ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿರುವ ವಿಚಾರ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಹುಲ್ ಗಾಂಧಿ ಜೊತೆ ಸಭೆ ಇದೆ ಅನ್ನೋದು ಊಹಾಪೋಹ. ಯಾವುದೇ ರೀತಿಯ ನಾಯಕತ್ವ ಬಗ್ಗೆ ಚರ್ಚೆಗೆ ಸಭೆ ನಿಗದಿಯಾಗಿಲ್ಲ ಸಿಎಂ ಡಿಸಿಎಂ ಕೇಂದ್ರ ಸಚಿವರನ್ನ ಭೇಟಿಯಾಗುತ್ತಿದ್ದಾರೆ ಎಂದರು.

ಕಳಸಾ ಬಂಡೂರಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ.  ಜಿಎಸ್ ಟಿ ಪರಿಹಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದೆಲ್ಲದರ ಬಗ್ಗೆ ಕೇಂದ್ರದ ಗಮನ ಸೆಳೆಯಲು ಕೇಂದ್ರ ಸಚಿವರನ್ನು ಸಿಎಂ ಮತ್ತು ಡಿಸಿಎಂ ಭೇಟಿಯಾಗುತ್ತಿದ್ದಾರೆ ಎಂದು  ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.vtu

Key words:  CM, DCM, visit, Delhi, Randeep Singh Surjewala