ಮತ್ತೆ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದ್ದಾರೆ ರಮ್ಯಾ

ಬೆಂಗಳೂರು, ಆಗಸ್ಟ್ 05, 2020 (www.justkannada.in): ರಮ್ಯಾ ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ.

ಹಲವು ದಿನಗಳಿಂದ ರಾಜಕೀಯದಿಂದ ದೂರವೇ ಉಳಿದಿದ್ದ ರಮ್ಯಾ ಈ ಕುರಿತ ಪರೋಕ್ಷ ಸುಳಿವು ನೀಡಿದ್ದಾರೆ.
ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಕೊರೋನಾ ನಿರ್ವಹಣೆ ಮಾಡಿದ ಬಗ್ಗೆ ಟೀಕಿಸಿದ ರಮ್ಯಾ ರಾಹುಲ್ ಗಾಂಧಿಯನ್ನು ದೂರದೃಷ್ಟಿಯಿರುವ ನಾಯಕ ಎಂದು ಶ್ಲಾಘಿಸಿದ್ದಾರೆ.

ಫೆಬ್ರವರಿ 12 ರಂದೇ ರಾಹುಲ್ ಕೊರೋನಾ ಬಗ್ಗೆ ಎಚ್ಚರಿಸಿದ್ದರು. ಆದರೆ ಪ್ರಧಾನಿ ಅದೇ ದಿನ ಕಾರ್ಯಕ್ರಮವೊಂದರಲ್ಲಿ ಭಕ್ಷ್ಯ ಭೋಜನ ಸವಿಯುತ್ತಿದ್ದರು. ಅದಕ್ಕೇ ದೇಶ ಇಂದು ಈ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಟೀಕಿಸಿದ್ದಾರೆ.

ರಾಹುಲ್ ದೂರದೃಷ್ಟಿಯುಳ್ಳ ದೇಶದ ಬಗ್ಗೆ ಕಾಳಜಿಯಿರುವ ನಾಯಕ ಎಂದು ಹೊಗಳಿದ್ದಾರೆ. ಈ ಮೂಲಕ ರಮ್ಯಾ ಮತ್ತೆ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.