ಡಿಕೆಶಿ ಆದಷ್ಟು ಬೇಗ ಮಾಜಿ ಮಂತ್ರಿಯಾಗ್ತಾರೆ ಎಂದ ರಮೇಶ್ ಜಾರಕಿಹೊಳಿಗೆ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ತಿರುಗೇಟು.

ಬೆಳಗಾವಿ,ಅಕ್ಟೋಬರ್,31,2023(www.justkannada.in):  ಡಿಕೆ ಶಿವಕುಮಾರ್ ಆದಷ್ಟು ಬೇಗನೆ ಮಾಜಿಮಂತ್ರಿ ಆಗುತ್ತಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ  ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೆಲವೊಬ್ಬರು ಕೆಲಸ ಇಲ್ಲದಕ್ಕೆ ಇಂತಹ ಉಸಾಬರಿ ಮಾಡುತ್ತಿರುತ್ತಾರೆ. ಮೈ ತುಂಬಾ ಕೆಲಸ ಇದ್ದಾಗ ಯಾವುದೂ ನೆನಪು ಆಗುವುದಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಇಂತಹ ವಿಚಾರಗಳು ಬರುತ್ತಿರುತ್ತವೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದರು.

ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ಯಾವ ಹುಲಿ ಉಗುರು ಇಲ್ಲ. ಇಲಿ ಉಗುರೂ ಇಲ್ಲ, ಅದು ಕೃತಕ ಉಗುರು. ನಮ್ಮ ಮನೆಯನ್ನು ಪರಿಶೀಲನೆ ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕಿತ್ತು ಅಥವಾ ನೋಟಿಸ್ ನೀಡಬೇಕಿತ್ತು. ನಾನು ಊರಲ್ಲಿ ಇರದ ಸಮಯದಲ್ಲಿ ನನ್ನ ಬೆಡ್ ರೂಮ್​​ಗೆ ಹೊಗಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಲೋಪವೆಸಗಿದ್ದಾರೆ ಎಂದು ಕಿಡಿಕಾರಿದರು.

Key words: Ramesh Jarakiholi –MLA- Lakshman Savadi – DK Shivakumar-former minister