ಉಡುಪಿಯಲ್ಲಿ ಯಕ್ಷಗಾನ ವೇಷದಲ್ಲಿ ಕಾಣಿಸಿಕೊಂಡ ರಮೇಶ್ ಅರವಿಂದ್ !

0
1

ಬೆಂಗಳೂರು, ಅಕ್ಟೋಬರ್ 12, 2022 (www.justkannada.in): ನಟ ರಮೇಶ್ ಅರವಿಂದ್ ಮೊದಲ ಬಾರಿ ಯಕ್ಷಗಾನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು. ಉಡುಪಿಯಲ್ಲಿ ರಮೇಶ್ ಅರವಿಂದ್ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷ ರೂಪದಲ್ಲಿ ರಮೇಶ್ ಅರವಿಂದ್ ಅವರ ಲುಕ್ ಗಮನ ಗಮನಸೆಳೆದಿದೆ.

ಉಡುಪಿಯ ಕುದ್ರು ನೆಸ್ಟ್ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ ಕಂಡು ಬಂದಿದ್ದು ವಿಡಿಯೋ ವೈರಲ್ ಆಗಿದೆ.

ಉಡುಪಿಯ ಛಾಯಾಗ್ರಾಹಕ ಫೋಕಸ್ ರಾಘು ಅವರ ಹೋಮ್ ಸ್ಟೇ ನಲ್ಲಿ ಯಕ್ಷಾವತಾರದಲ್ಲಿ ನಟ ರಮೇಶ್ ಕಾಣಿಸಿಕೊಂಡಿದ್ದಾರೆ.

ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ. ಜತೆಗೆ ನಾನಾ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ.