ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರ: ಸಚಿವ ಅಶ್ವಥ್ ನಾರಾಯಣ್ ಗೆ ಡಿ.ಕೆ ಶಿವಕುಮಾರ್ ತಿರುಗೇಟು.

0
1

ಬೆಂಗಳೂರು,ಡಿಸೆಂಬರ್,28,2022(www.justkannada.in):  ಅಯೋಧ್ಯೆ ಮಾದರಿಯಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ರಾಮಮಂದಿರ ಕಟ್ಟಲು ಬೇಡ  ಅಂದವರು ಯಾರು..?  ಪಾಪ ಅವರು ಜಿಲ್ಲಾ ಮಂತ್ರಿ,  ನಾವು ಅವರನ್ನ ತಡಿತೀವಾ..?  ಎಂದು ಪ್ರಶ್ನಿಸಿದರು.

ರಾಮ, ಸೀತೆ ಮಂದಿರ ಕಟ್ಟಲಿ , ಅಂಜನೇಯ ಮಂದಿರ, ಶಿವನ ಮಂದಿರವನ್ನಾದರೂ ಕಟ್ಟಲಿ ಅಶ್ವಥ್ ಮಂದಿರವನ್ನಾದರೂ ಕಟ್ಟಲಿ ಬೇಜಾರಿಲ್ಲ.  ಅದೆಲ್ಲಾ ನಮಗೇಕೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Ram temple -construction –Ramnagar-Minister -Aswath Narayan -DK Shivakumar.