ರಾಮಮಂದಿರ-ಬಾಬ್ರಿ ಮಸೀದಿ ತೀರ್ಪು: ಬೆಂಗಳೂರಲ್ಲಿ ಅಂಗಡಿ ಮುಗ್ಗಟ್ಟು ಸ್ವಯಂ ಪ್ರೇರಿತ ಬಂದ್

ಬೆಂಗಳೂರು, ನವೆಂಬರ್ 09, 2019 (www.justkannada.in): ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪು ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಗೋರಿಪಾಳ್ಯದಲ್ಲಿ ಎಂದಿನಂತೆ ಅಂಗಡಿಗಳು ಓಪನ್ ಮಾಡಲಾಗುತ್ತೆ. ಆದರೆ ಇಂದು ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಚಾಮರಾಮಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗಿದೆ.ವ್ಯಾಪಾರಿಗಳು ಮಾರ್ಕೆಟ್ ಏರಿಯಾಗಳಲ್ಲಿ ಎಂದಿನಂತೆ ಅಂಗಡಿ ತೆರೆದಿದ್ದಾರೆ.

ಗೋರಿಪಾಳ್ಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಹುತೇಕ ಅಂಗಡಿ ಮುಗ್ಗಟ್ಟುಗಳು ಇನ್ನೂ ಓಪನ್ ಆಗಿಲ್ಲ. ಮತ್ತೆ ಕೆಲವು ಮಂದಿ ಹತ್ತು ಗಂಟೆಯ ನಂತರ ಪರಿಸ್ಥಿತಿ ನೋಡಿಕೊಂಡು ಅಂಗಡಿ ತೆರೆಯಲು ನಿರ್ಧರಿಸಿದ್ದಾರೆ.