Sunday, September 20, 2026

BDA Apartments

ರಾಮ್ ಗೋಪಾಲ್ ವರ್ಮಾ ಮೆಚ್ಚಿದ ‘ಗರುಡ ಗಮನ ವೃಷಭ ವಾಹನ’ BDA JK_Adv BDA Adv
Home Cinema ರಾಮ್ ಗೋಪಾಲ್ ವರ್ಮಾ ಮೆಚ್ಚಿದ ‘ಗರುಡ ಗಮನ ವೃಷಭ ವಾಹನ’

ರಾಮ್ ಗೋಪಾಲ್ ವರ್ಮಾ ಮೆಚ್ಚಿದ ‘ಗರುಡ ಗಮನ ವೃಷಭ ವಾಹನ’

ಬೆಂಗಳೂರು, ಜನವರಿ 19, 2021 (www.justkannada.in): ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಹೌದು. ‘ಗರುಡ ಗಮನ ವೃಷಭ ವಾಹನ’ ಚಿತ್ರ ರಾಮ್ ಗೋಪಾಲ್ ವರ್ಮಾ ಅವರ ಮನಸೂರೆಗೊಳಿಸಿದೆ. ಇಡೀ ಸಿನಿಮಾಕ್ಕೆ ಫಿದಾ ಆಗಿರುವ ಆರ್ ಜಿವಿ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.

ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ. ಸಿನಿಮಾ ಮತ್ತೊಂದು ಲೆವೆಲ್ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಎಂದಿರುವ ಆರ್ಜಿವಿ, ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ ಎಂದು ಹೊಗಳಿದ್ದಾರೆ.

ರಾಮ್ ಗೋಪಾಲ್ ವರ್ಮಾಗೂ ಮೊದಲೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಇಷ್ಟಪಟ್ಟಿದ್ದರು.