ರಶ್ಮಿಕಾ-ರಕ್ಷಿತ್ ಒಂದು ಮಾಡಿದ ‘ಬೆಳಗೆದ್ದು’ ಸಾಂಗ್ !

ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಸಾಂಗ್‌ ಯೂಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್‌ಗಿಂತಲೂ (10 ಕೋಟಿ+) ಅಧಿಕ ವೀವ್ಸ್ ಪಡೆದುಕೊಂಡಿದೆ.

ಈ ಸಂತಸದ ಸುದ್ದಿಯನ್ನ ರಕ್ಷಿತ್‌ ಶೆಟ್ಟಿ ಟ್ವೀಟ್‌ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಕೂಡ, ‘ಬೆಳಗೆದ್ದು.. ನನ್ನ ಮೊದಲ ಸಾಂಗ್‌… ಇದೀಗ ಇದು ನಿಮ್ಮೆಲ್ಲರ ಪ್ರೀತಿಯಿಂದ ನೂರು ಮಿಲಿಯನ್ ತಲುಪಿದೆ. ಈ ಹಾಡಿನ ಚಿತ್ರೀಕರಣ ಮಾಡಿದ್ದು ನನಗಿನ್ನೂ ನೆನಪಿದೆ’ ಬರೆದುಕೊಂಡಿದ್ದಾರೆ.

ರಶ್ಮಿಕಾ ಟ್ವೀಟ್‌ʼಗೆ ರಕ್ಷಿತ್‌ ಶೆಟ್ಟಿ ರಿಪ್ಲೈ ಮಾಡಿದ್ದು, ‘ನೀನಿನ್ನೂ ಎತ್ತರಕ್ಕೆ ಬೆಳೆಯಬೇಕು. ನಿನ್ನ ಕನಸುಗಳೆಲ್ಲಾ ನನಸಾಗಲಿ’ ಎಂದು ವಿಶ್‌ ಮಾಡಿದ್ದಾರೆ.