Tuesday, August 18, 2026

BDA Apartments

Home Front Page ರಾಜ್ಯಸಭೆ ಚುನಾವಣೆ: ನೂರಕ್ಕೆ ನೂರರಷ್ಟು ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ- ಮಾಜಿ ಸಿಎಂ ಬಿಎಸ್ ವೈ.

ರಾಜ್ಯಸಭೆ ಚುನಾವಣೆ: ನೂರಕ್ಕೆ ನೂರರಷ್ಟು ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ- ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು, ಜೂ.1,2022(www.justkannada.in):  ರಾಜ್ಯಸಭೆ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷದ ಬೆಂಬಲ ಪಡೆಯದೆ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ. ನೂರಕ್ಕೆ ನೂರರಷ್ಟು ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಮಗೆ ಯಾವುದೇ ಪಕ್ಷದ ಬೆಂಬಲ ಅಥವಾ ಸಹಾಯ ಅಗತ್ಯವಿಲ್ಲ. ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್‍ ಸಿಂಗ್ ಅವರುಗಳು ಗೆದ್ದೇ ಗೆಲ್ಲುತ್ತಾರೆ. ರಾಜ್ಯಸಭೆಗೆ ಹೋಗುತ್ತಾರೆ ಎಂದರು.

ನಮಗಿರುವ ಮತಗಳಲ್ಲೇ ನಾವು ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ. ನಮ್ಮ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಯಾರನ್ನೂ ಕೂಡ ಕೇಳುವುದಿಲ್ಲ. ನಮ್ಮ ಬಳಿ 122 ಮತಗಳಿವೆ. ಎಲ್ಲ ಲೆಕ್ಕಾಚಾರ ಹಾಕಿಯೇ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಬೇರೆ ಪಕ್ಷಗಳ ಬೆಳವಣಿಗೆ ಬಗ್ಗೆ ಚರ್ಚೆಯ ಅಗತ್ಯವಿಲ್ಲ. ನಮಗೆ ಅಗತ್ಯ ಮತವಿರುವುದರಿಂದ ಬೇರೆಯವರ ಸಹಾಯದ ಅಗತ್ಯವೇಕೆ ಎಂದು  ಬಿಎಸ್ ವೈ ಪ್ರಶ್ನಿಸಿದರು.

Key words: Rajya Sabha-elections-our candidates-will -win- Former CM-BS Yeddyurappa