ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿಗೆ ಜಯ.

ಬೆಂಗಳೂರು,ಫೆಬ್ರವರಿ,27,2024(www.justkannada.in): ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್  ಅಭ್ಯರ್ಥಿಗಳಾದ ಅಜಯ್ ಮಾಕೆನ್  47 , ಸೈಯದ್ ನಾಸೀರ್ ಹುಸೇನ್ 47, ಜಿ.ಸಿ.ಚಂದ್ರಶೇಖರ್ 45 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ.

ಇನ್ನು  ಬಿಜೆಪಿಯಿಂದ ಸ್ಪರ್ಧಿಸಿದ್ದ  ನಾರಾಯಣಸಾ ಬಾಂಡಗೆ ಅವರು 47 ಮತಗಳನ್ನ ಪಡೆದು ಜಯ ಸಾಧಿಸಿದ್ದಾರೆ. ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಜೆಡಿಎಸ್ ನ ಕುಪೇಂದ್ರ ರೆಡ್ಡಿ 36 ಮತಗಳನ್ನ ಪಡೆದು  9 ಮತಗಳಿಂದ ಸೋಲನುಭವಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Key words: Rajya Sabha -Election -Results –Announced