ನೆಟ್’ಫ್ಲಿಕ್ಸ್’ನಲ್ಲೂ ರಿಲೀಸ್ ಆದ ರಜನಿಯ ‘ಅಣ್ಣಾಥೆ’

0
1

ಬೆಂಗಳೂರು, ನವೆಂಬರ್ 28, 2021 (www.justkannada.in): ರಜನಿಕಾಂತ್​ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್​ 4ರಂದು ರಿಲೀಸ್​ ಆಗಿತ್ತು.  ಇದೀಗ ಬಿಡುಗಡೆಯಾದ ಕಡಿಮೆ ಅವಧಿಯಲ್ಲಿಯೇ ನೆಟ್​ಫ್ಲಿಕ್ಸ್​ಗೆ ಬಂದಿದೆ.

ಅಂದಹಾಗೆ ‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿತ್ತು.

ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ಮೂರು ವಾರಗಳಲ್ಲಿ ಈ ಚಿತ್ರ ಬರೊಬ್ಬರಿ 239 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.

‘ಅಣ್ಣಾಥೆ’ ಸಿನಿಮಾದಲ್ಲಿ ರಜನಿ ಜತೆಗೆ, ಕೀರ್ತಿ ಸುರೇಶ್​, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ.