ಶ್ರೀನಗರ,ಮೇ,15,2025 (www.justkannada.in): ಉಗ್ರರ ವಿರುದ್ದ ಅಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದಷ್ಟೆ ಪಂಜಾಬ್ ನ ಆದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಯೋಧರಿಗೆ ಅಭಿನಂದಿಸಿದ ಬೆನ್ನಲ್ಲೆ ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮುಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿ ಯೋಧರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ಶ್ರೀನಗರಕ್ಕೆ ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೈನಿಕರಿಗೆ ಅಭಿನಂದಿಸಿ ಭಾರತೀಯ ಯೋಧರ ಪರಾಕ್ರಮ ಕೊಂಡಾಡಿದರು.
ಸೇನಾ ಕಚೇರಿಯಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಹಲ್ಗಾಮ್ ನಲ್ಲಿ ದಾಳಿ ಮಾಡಿದವರಿಗೆ ತಕ್ಕ ಶಾಸ್ತಿ ಆಗಿದೆ. ಪಾಕ್ ಗೆ ಉಗ್ರರಿಗೆ ಕಠಿಣ ಸಂದೇಶ ರವಾನೆಯಾಗಿದೆ. ಉಗ್ರರ ದಾಳಿಯನ್ನ ಇಡೀ ವಿಶ್ವವೇ ಖಂಡಿಸಿದೆ. ದೇಶದ ಜನರ ಪರವಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅಪರೇನ್ ಸಿಂಧೂರ ನಮ್ಮೆಲ್ಲರ ಪ್ರತಿಜ್ಞೆ. ಅದು ಕೇವಲ ಹೆಸರಲ್ಲ.ಅದು ಎಚ್ಚರಿಕೆಯ ಸಂದೇಶ. ಭಯೋತ್ಪಾದಕರಿಗೆ ನಮ್ಮ ಸೇನೆ ತಕ್ಕ ಪಾಠ ಕಲಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
Key words: Union Defence Minister, Rajnath Singh, congratulates, soldiers