ಮಳೆ, ಕೋವಿಡ್ ಸಂಕಷ್ಟ ಕಾಲದಲ್ಲೂ ಗಳಿಕೆಯಲ್ಲಿ ದಾಖಲೆ ಬರೆದ ರಜನಿಯ ‘ಅಣ್ಣಾಥೆ’

ಬೆಂಗಳೂರು, ನವೆಂಬರ್ 13, 2021 (www.justkannada.in): ರಜಿನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರ ಬಾಕ್ಸಾಫೀಸ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ.

ಕೊವಿಡ್, ಚೆನ್ನೈನಲ್ಲಿ ಮಳೆ ಮೊದಲಾದ ಕಾರಣದಿಂದ ಒಟ್ಟಾರೆ ಗಳಿಕೆಗೆ ಹೊಡೆತ ಬಿದ್ದಿದ್ದರೂ ಕೂಡ 200 ಕೋಟಿ ಕ್ಲಬ್​ ಸೇರಿದೆ.

2021ರಲ್ಲಿ ಅತ್ಯಂತ ವೇಗವಾಗಿ 200 ಕೋಟಿ ರೂ. ಕ್ಲಬ್​ಗೆ ಸೇರಿದ ಚಿತ್ರ ಎಂಬ ದಾಖಲೆ ‘ಅಣ್ಣಾಥೆ’ ಪಾಲಾಗಿದೆ.

ಚಿತ್ರ ಅಂದಾಜು 210 ಕೋಟಿಗೂ ಅಧಿಕ ಹಣವನ್ನು ಬಾಕ್ಸಾಫೀಸ್​ನಲ್ಲಿ ಗಳಿಸಿದ್ದು, ಚಿತ್ರ 250 ಕೋಟಿ ಕ್ಲಬ್​ಗೆ ಸೇರುವ ಸಾಧ್ಯತೆ ಇದೆ.
ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿ ಚಿತ್ರ ತೆರೆಗೆ ಬಂದಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು.