ರಾಜಸ್ತಾನ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ: ಡಿಸಿಎಂ ಸ್ಥಾನದಿಂದ ಸಚಿನ್ ಪೈಲೆಟ್ ಉಚ್ಛಾಟನೆ..

ರಾಜಸ್ತಾನ,ಜು,14,2020(www.justkannada.in):  ರಾಜಸ್ಥಾನ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ಉಂಟಾಗಿದ್ದು ಈ ನಡುವೆ ರಾಜಸ್ಥಾನ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.jk-logo-justkannada-logo

ರಾಜಸ್ತಾನ ರಾಜ್ಯ ಕಾಂಗ್ರೆಸ್’ನಲ್ಲಿ ರಾಜಕೀಯ ಬಿಕ್ಕಟ್ಟು ತಾರಕ್ಕೇರಿದ್ದು, ಈ ಮಧ್ಯೆ ಬಂಡಾಯ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಇಂದು ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆ ಬಳಿಕ ಡಿಸಿಎಂ ಸ್ಥಾನದಿಂದ ಸಚಿನ್ ಪೈಲೆಟ್ ರನ್ನ ಉಚ್ಛಾಟನೆ ಮಾಡಲಾಗಿದೆ. ಪಿಸಿಸಿ ಅಧ್ಯಕ್ಷ ಸ್ಥಾನದಿಂದಲೂ ಕೋಕ್ ನೀಡಲಾಗಿದ್ದು ಈ ಸ್ಥಾನಕ್ಕೆ ಗೋವಿಂದ್ ಸಿಂಗ್ ಅವರನ್ನ ನೇಮಕ ಮಾಡಲಾಗಿದೆ ಎನ್ನಲಾಗಿದೆ.rajasthan-state-politics-sachin-pilot-expelled-dcm-position

ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಸಚಿನ್ ಪೈಲಟ್ ಅವರು ಗೈರು ಹಾಜರಾಗಿದ್ದರು. ಇದರಂತೆ ಸಭೆಯಲ್ಲಿ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪೈಲಟ್ ಅವರ ಜೊತೆಗೆ ಬಂಡಾಯ ಸಾರಿದ್ದ ಮತ್ತಿಬ್ಬರು ಸಚಿವರನ್ನೂ ಕೂಡ ಉಚ್ಛಾಟಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Rajasthan -State- Politics-Sachin Pilot -expelled – DCM -position