Thursday, September 17, 2026

BDA Apartments

2ನೇ ದಿನವೂ ಮುಂದುವರೆದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ BDA JK_Adv BDA Adv
Home Front Page 2ನೇ ದಿನವೂ ಮುಂದುವರೆದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ.

2ನೇ ದಿನವೂ ಮುಂದುವರೆದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ.

ಬೆಂಗಳೂರು,ಸೆಪ್ಟಂಬರ್,13,2022(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಬಡಾವಣೆಗಳು ಜಲಾವೃತವಾಗಿ ಜನರು ತೊಂದರೆಗೊಳಗಾದ ಹಿನ್ನೆಲೆ ಎಚ್ಚೆತ್ತ ರಾಜ್ಯ ಸರ್ಕಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದೆ.

ನಿನ್ನೆ ನಗರದ ಮುನೇನಕೊಳಲು ಬಳಿ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಆರಂಭಿಸಿದ್ಧ ಬಿಬಿಎಂಪಿ ಅಧಿಕಾರಿಗಳು ಇಂದು 2ನೇ ದಿನವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮುನೇನಕೊಳಲು, ಶಾಂತಿನಿಕೇತನ ಲೇಔಟ್ ನಲ್ಲಿ  ರಾಜಕಾಲುವೆ ಒತ್ತುವರಿ ಮಾಡಲಾಗಿರುವ ಕಟ್ಟಡಗಳನ್ನ ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ.2ನೇ ದಿನವೂ ಮುಂದುವರೆದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ottuvari

ತಹಶೀಲ್ದಾರ್ ನೊಟಿಸ್ ಕೊಟ್ಟ 3 ದಿನದ ಬಳಿಕ ಡೆಮಾಲಿಷನ್ ಮಾಡಬೇಕಾಗಿದ್ದು ಅಲ್ಲಿವರೆಗೂ ಕೇವಲ ಕಾಂಪೌಂಡ್ ಗೋಡೆ ಮಾತ್ರ ತೆರವು ಮಾಡುವಂತೆ  ಜೆಸಿಬಿ ಚಾಲಕನಿಗೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

Key words: Rajakaluve -encroachment –clearance-operation-continued – 2nd day.