ರಾಜ್ಯದಲ್ಲಿ ಉತ್ತಮ ಮಳೆ: ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,9,2024 (www.justkannada.in): ರಾಜ್ಯದಲ್ಲಿ ಕಳೆದ ವರ್ಷ ಬರ ಬಂದಿತ್ತು. ಈ ವರ್ಷ ಎಲ್ಲಾ ಕಡೆ ಉತ್ತಮವಾಗಿ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗುತ್ತಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಸಿಇಒಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 30 ಇಲಾಖೆಗಳ 68 ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ.  ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಆವರಿಸಿತ್ತು. ಆದರೆ ಈ ಬಾರಿ ಎಲ್ಲಾ ಕಡೆ ಉತ್ತಮವಾಗಿ ಮಳೆಯಾಗುತ್ತಿದ್ದು, ಜಲಾಶಯಗಳು ತುಂಬುತ್ತಿವೆ.  82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದೆ ರಾಜ್ಯದಲ್ಲಿ ಈವರಗೆ ಬಿತ್ತನೆ ಬೀಜ ರಸಗೊಬ್ಬರ ಕೊರತೆ ಇಲ್ಲ. ಬಿತ್ತನೆ ಬೀಜ, ರಸಗೊಬ್ಬರ  ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು . ಯಾವ ಸಮಸ್ಯೆ ಆಗಬಾರದೆಂದು ಕೃಷಿ ಸಚಿವ ಚಲುವರಾಯಸ್ವಾಮಿಗೆ ಸೂಚನೆ ನೀಡಲಾಗಿದೆ ಎಂದರು.

2 ದಿನಗಳ ಕಾಲ ಡಿಸಿ, ಸಿಇಒ ಕಾರ್ಯದರ್ಶಿಗಳು ಜೊತೆ ಸಭೆ ನಡೆಸಲಾಗಿದೆ.  ಕನಿಷ್ಠ 3 ತಿಂಗಳಿಗೊಮ್ಮೆ ಸಭೆ ನಡೆಸುವುದು ಸರ್ಕಾರದ ಉದ್ದೇಶ.  2023 ಸೆಪ್ಟಂಬರ್ 12,  13 ರಲ್ಲಿ ಸಭೆ ನಡೆಸಲಾಗಿತ್ತು ಬಳಿಕ ಸಭೆ ನಡೆಸೋಕೆ ಆಗಿರಲಿಲ್ಲ. ಎಲ್ಲಾ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ಬ್ಯೂಸಿಯಾಗಿದ್ದರು.  ಹೀಗಾಗಿ ಸಭೆ ನಡೆಸಲು ಆಗಲಿಲ್ಲ.  ಜಿಲ್ಲೆಯಲ್ಲಿ ಡಿಸಿ, ಜಿಲ್ಲಾ ಪಂಚಾಯತ್ ಸಿಇಒ, ಎಸ್ಪಿಗಳು ಬಹಳ ಮುಖ್ಯ ಆಡಳಿತ ಸುಗಮ ಪರಿಣಾಮಕಾರಿಯಾಗಬೇಕಾದರೆಇವರು ಬಹಳ ಮುಖ್ಯ. ಯೋಜನೆಗಳು ಜನರಿಗೆ ತಲುಪಲು ಈ ಅಧಿಕಾರಿಗಳು ಮುಖ್ಯ. ಜನರಿಗೆ ಯೋಜನೆಗಳನ್ನ ತಲುಪಿಸುವುದು ಅಧಿಕಾರಿಗಳಿಂದ ಸಾಧ್ಯ ಒಳ್ಳೆಯ ಕೆಲಸಗಳನ್ನ ಮಾಡುವವರಿಗೆ ಬೆನ್ನು ತಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: rains, No shortage, seeds, fertilizers, CM Siddaramaiah