ಇನ್ನೂ 5 ದಿನ ಮಳೆಯಾಗುತ್ತೆ: ಅಗತ್ಯ ಪರಿಹಾರ ಕ್ರಮ ಕೈಗೊಳ್ಳಿ- ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಸಲಹೆ.

 ಬೆಂಗಳೂರು,ಮೇ,22,2023(www.justkannada.in): ಬೆಂಗಳೂರಿನಲ್ಲಿ ಇನ್ನೂ ಐದು ದಿನಗಳ ಕಾಲ ಮಳೆಯಾಗುತ್ತದೆ. ಹೀಗಾಗಿ ಅಗತ್ಯ ಪರಿಹಾರ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೆಲವೇ ಗಂಟೆಗಳ ಮಳೆಗೆ ಸಾವು ಆಗಿರುವುದು ನೋವಿನ ಸಂಗತಿ.  ಬಿಬಿಎಂಪಿ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟ. ಬಿಬಿಎಂಪಿ ಸಿಬ್ಬಂದಿ ಕೂಡಲೇ ರಕ್ಷಣೆ ಮಾಡುವ ಕೆಲಸ ಮಾಡಲಿಲ್ಲ. ಹವಮಾನ ಇಲಾಖೆ ಎಚ್ಚೆರಿಕೆ ನೀಡಿತ್ತು. ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೂ  5ದಿನಗಳ ಕಾಲ ಮಳೆ ಆಗುತ್ತೆ. ಪರಿಹಾರ ಕ್ರಮ ಕೈಗೊಳ್ಳಬೇಕು.  ಮಳೆಗೆ ಬೆಂಗಳೂರು ನಗರದ ಹಲವೆಡೆ ಮರಗಳು ಧರೆಗುರುಳಿವೆ. ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಪರಿಹಾರ ಕ್ರಮಕ್ಕೆ ಸಿಎಂ ಆದ್ಯತೆ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Key words:  rain -5 days-bangalore – Former CM -Bommai -advises – government.