ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ: ಹೈಕಮಾಂಡ್ ತೀರ್ಮಾನ ಅಂತಿಮ- ಸಿಎಂ ಸಿದ್ದರಾಮಯ್ಯ

ಮೈಸೂರು,ಜನವರಿ,13,2026 (www.justkannada.in): ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ರಾಜಕೀಯ ಚರ್ಚೆಗಳು ಆಗಿಲ್ಲ. ಗೊಂದಲಗಳನ್ನು ಮಾಧ್ಯಮದವರು ಮಾಡುತ್ತಿದ್ದಿರಾ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚಾರ ಮಾಡಿದರು.

ತಮಿಳುನಾಡಿಗೆ ತೆರಳಲು ಮೈಸೂರಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್ ಉಪಸ್ಥಿತರಿದ್ದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿಗೆ ಹೋಗುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತ ಮಾಡಿದ್ದೇವು. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಗೊಂದಲದ ಬಗ್ಗೆ ನಾನು ಅಥವಾ ಡಿಸಿಎಂ ಮಾತನಾಡಬೇಕು ಬೇರೆ ಯಾರೋ ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ನಮ್ಮ ಶಾಸಕರು ಕೂಡ ಈಗ ಮಾತನಾಡುತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ. ಈ ಸಂಕ್ರಾಂತಿ ಕಾಂತ್ರಿಯಲ್ಲ ಅದು ಮಾಧ್ಯಮದವರ ಚರ್ಚೆ  ಎಂದರು.

ಡಿಕೆ ಶಿವಕುಮಾರ್ ಅವರ ಕೊಟ್ಟ ಮಾತು ಟ್ವಿಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದನ್ನು ಅವರು ಹೇಳಿಲ್ಲ ನಾನು ಹೇಳಿಲ್ಲ ಎಂದರು.

ನಾಯಕತ್ವ ಗೊಂದಲ ಸ್ಥಳೀಯವಾಗಿ ಬಗೆಹರಿಕೊಳ್ಳಿ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಯ್ಯ , ಯಾರು ಖರ್ಗೆ ಹೇಳಿದ್ದಾರೆಯೇ  ಹಾಗಂತ. ನಾನು ಡಿಕೆ ಶಿವಕುಮಾರ್  ಈಗಾಗಲೇ ಮಾತನಾಡಿದ್ದೇವಲ್ಲ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದೆ ಎಂದರು.

ಕುಮಾರಸ್ವಾಮಿ ಸ್ಟೇಟ್ ಪಾಲಿಟಿಕ್ಸ್ ನಲ್ಲಿ ಆಕ್ಟಿವ್ ವಿಚಾರ, ಕುಮಾರಸ್ವಾಮಿಗೆ ಹುಷಾರಿರಲಿಲ್ಲ. ಈಗ ಆರೋಗ್ಯವಾಗಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪ್ರೆಸ್ ಮೀಟ್ ಮಾಡುತ್ತಿದ್ದಾರೆ ಮಾಡಲಿ ಎಂದರು

ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುತ್ತೇವೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಮಗೆ ಯಾವುದೇ ತೊಂದರೆಯಿಲ್ಲ. ಕಾಂಗ್ರೆಸ್ ವಿರೋಧದ ವೋಟ್ ಅವರಿಗೆ ಹೋಗುತ್ತೆ. ನಮ್ಮ ಪರವಾದ ವೋಟ್ ನಮಗೆ ಬರತ್ತೆ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Mysore, Congress Leader Rahul Gandhi, CM Siddaramaiah