ನವದೆಹಲಿ,ಸೆಪ್ಟಂಬರ್,18,2025 (www.justkannada.in): 2023ರ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕ ರಾಜ್ಯದಲ್ಲೂ ಮತಗಳ್ಳತನ ಆಗಿದೆ. ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಡಿದ ರಾಹುಲ್ ಗಾಂಧಿ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದ ಬಗ್ಗೆ ಪ್ರಸ್ತಾಪ ಮಾಡಿದರು. ಕಳೆದ ಬಾರಿ ನಾನು ಹೊಸ ಮತದಾರರ ಸೇರ್ಪಡೆ ಬಗ್ಗೆ ಹೇಳಿದ್ದೆ ಈ ಬಾರಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿರೋದನ್ನ ಹೇಳುತ್ತೇನೆ. 2023ರಲ್ಲಿ ಆಳಂದ ಕ್ಷೇತ್ರದಲ್ಲಿ 6080 ಮತಗಳನ್ನ ಡಿಲಿಟ್ ಮಾಡಲಾಗಿದೆ. ಸೂರ್ಯಕಾಂತ ಎಂಬಾತ ಮತದಾರರ ಹೆಸರು ಡಿಲೀಟ್ ಮಾಡಿಸಿದ್ದಾನೆ. 14 ನಿಮಿಷದಲ್ಲಿ 12 ಮತದಾರರ ಹೆಸರನ್ನ ಡಿಲೀಟ್ ಮಾಡಿಸಿದ್ದಾನೆ. ಅಳಂದದಲ್ಲಿ ಗೋದಾಬಾಯಿ ಎಂಬುವವರ ಹೆಸರನ್ನ ಡಿಲಿಟ್ ಮಾಡಲಾಗಿದೆ ಎಂದರು.
ಹೆಸರು ಡಿಲಿಟ್ ಗೆ ಯಾರು ಅರ್ಜಿ ಕೊಟ್ಟಿದ್ದರು ಎಂಬುದೇ ಗೊತ್ತಿಲ್ಲ. ಹೆಸರು ಡಿಲಿಟ್ ಗೆ ಹೊರ ರಾಜ್ಯಗಳ ಮೊಬೈಲ್ ಬಳಕೆಯಾಗಿದೆ ಮೊಬೈಲ್ ಸಂಖ್ಯೆ ಯಾವುದು ಒಟಿಪಿ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಮತದಾರರನ್ನ ಟಾರ್ಗೆಟ್ ಮಾಡಿ ಡಿಲೀಟ್ ಮಾಡಿಸಲಾಗಿದೆ ಪ್ರತ್ಯೇಕವಾಗಿ ಕಾಂಗ್ರೆಸ್ ಮತದಾರರ ಪಟ್ಟಿ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿದರು.
ನಾನು ಪ್ರಜಾಪ್ರಭುತ್ವದ ಮೌಲ್ಯ ರಕ್ಷಿಸಲು ಬಯಸುತ್ತೇನೆ ಈಬಾರಿ ನಾನು ಶೇ 100 ರಷ್ಟು ಸಾಕ್ಷ್ಯವನ್ನ ಸಂಗ್ರಹ ಮಾಡಿದ್ದೇನೆ. ಮಹರಾಷ್ಟ್ರದಲ್ಲೂ ಮತಗಳ್ಳತನ ಆಗಿದೆ. ಇಂತಹ ಹಲವು ಪ್ರಕರಣಗಳು ದೇಶದಲ್ಲಿ ಇವೆ. ಹೀಗೆ ಮಾಡುವವರನ್ನ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Key words: Voter fraud, Karnataka Voter, names, deleted, Rahul Gandhi