ಮತದಾರರ ಪಟ್ಟಿಯಲ್ಲಿ 5 ರೀತಿ ಅಕ್ರಮ: ಸಾಕ್ಷಿ ಸಮೇತ ವಿವರಿಸಿದ ರಾಹುಲ್ ಗಾಂಧಿ

ಬೆಂಗಳೂರು,ಆಗಸ್ಟ್,7,2025 (www.justkannada.in):  ಕರ್ನಾಟಕದ ಲೋಕಸಭೆಯೊಂದರಲ್ಲಿ ಮತಗಳ್ಳತನವಾಗಿದೆ ಎಂದು ಈಗಾಗಲೇ ಹಲವು ಬಾರಿ ಆರೋಪಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದೀಗ ಸಾಕ್ಷಿ ಸಮೇತ ವಿವರಣೆ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಮತದಾರರ ಪಟ್ಟಿಯಲ್ಲಿ 5 ರೀತಿಯಲ್ಲಿ ಅಕ್ರಮ ನಡೆದಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ  ಒಬ್ಬ ವ್ಯಕ್ತಿಯ ಹೆಸರು ನಾಲ್ಕು ಬೂತ್ ಗಳಲ್ಲಿ ಸೇರ್ಪಡೆಯಗಿದೆ. ಗುರುಕಿರತ್ ಸಿಂಗ್ ಡ್ಯಾಂಗ್ ಎಂಬಾತನ ಹೆಸರು 4 ಬೂತ್ ಗಳಲ್ಲಿದೆ ಇಂತಹ ಸಾವಿರಾರು ಉದಾಹರಣೆಗಳು ಇವೆ.  ಆದಿತ್ಯ ಶ್ರೀವಾಸ್ತವ್ಯ  ಎಂಬಾತನ ಹೆಸರು ಬೇರೆ  ಬೇರೆ ರಾಜ್ಯಗಳ ಮತದಾರರ ಪಟ್ಟಿಯಲ್ಲಿದೆ ಈತನ ಹೆಸರು ಕರ್ನಾಟಕ ಮಹಾರಾಷ್ಟ್ರದಲ್ಲೂ ಇದೆ.  ಉತ್ತರ ಪ್ರದೇಶದಲ್ಲೂ ಮತದಾನ ಹಕ್ಕು ಹೊಂದಿದ್ದಾನೆ ಲಕ್ಷಾಂತರ ಜನ ಬೇರೆ ರಾಜ್ಯ ಗಳ ನಕಲಿ ಐಡಿ ಇಟ್ಟುಕೊಂಡಿದಾರೆ ಎಂದು ಆರೋಪಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 11 ಸಾವಿರ ಜನರಿಂದ ಅಕ್ರಮ ಮತದಾನ ನಡೆದಿದೆ  40,009 ಜನರು  ನಕಲಿ ಅಡ್ರೆಸ್ ಕೊಟ್ಟಿದ್ದಾರೆ.  ಅಕ್ರಮವಾಗಿ ಹೆಸರು ಸೇರಿಸಿರುವ ಮತದಾರರ ಸಂಖ್ಯೆ 10,452,   4132 ಇನ್ ವ್ಯಾಲಿಡ್ ಫೋಟೊಗಳಿರುವ ಹೆಸರಿದೆ.

ನಾವು ನಕಲಿ ವೋಟರ್ ಐಡಿಗಳನ್ನ ಪತ್ತೆ ಮಾಡಿದ್ದೇವೆ. ವೋಟರ್ ಐಡಿಯಲ್ಲಿ ಮನೆಯ ಸಂಖ್ಯೆ 0 ಎಂದು ಉಲ್ಲೇಖಿಸಲಾಗಿದೆ  ಮತದಾರನ ತಂದೆ  ಹೆಸರು ಸರಿಯಾಗಿ ನಮೂದಾಗಿಲ್ಲ. ಸೂಕ್ತವಿಳಾಸವಿಲ್ಲದ 40 ಸಾವಿರ ಮತದಾರರ ಹೆಸರುಗಳಿವೆ  ಈ ವಿಳಾಸ ಪರಿಶೀಲನೆಗೆ ನಮ್ಮ ತಂಡ ಕಳುಸಲಾಗಿತ್ತು. ನಕಲಿ ವೋಟ್ ಸೃಷ್ಠಿಸಿ ಮತದಾನ ಮಾಡಲಾಗಿದೆ. ನಾವು ಕರ್ನಾಟಕದಲ್ಲಿ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದವು. ಆದರೆ 9 ಕ್ಷೇತ್ರಗಳಲ್ಲಿ ಮಾತ್ರ ಗೆದ್ದವು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Key words: Vote, Illegal, congress leader, Rahul Gandhi, witness