ಮೋದಿ ಇಮೇಜ್ ಕಾಪಾಡುವುದೇ ಅಪರೇಷನ್ ಸಿಂಧೂರ ಉದ್ದೇಶವಾಗಿತ್ತು-ರಾಹುಲ್ ಗಾಂಧಿ

ನವದೆಹಲಿ,ಜುಲೈ,29,2025 (www.justkannada.in): ಆಪರೇಷನ್ ಸಿಂಧೂರದ ಉದ್ದೇಶ ಪ್ರಧಾನಿ ಮೋದಿ ಇಮೇಜ್ ಕಾಪಾಡುವುದು.  ಮೋದಿ ಇಮೇಜ್ ಕಾಪಾಡುವುದೇ ಕಾರ್ಯಾಚರಣೆ ಉದ್ದೇಶವಗಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಇಂದು ಆಪರೇಷನ್ ಸಿಂಧೂರ ಬಗ್ಗೆ ಚರ್ಚೆಯಾಯಿತು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಹಲ್ಗಾಮ್ ದಾಳಿ ಹಿಂದೆ ಜನರಲ್ ಮುನೀರ್ ಕೈವಾಡವಿದೆ. ಮುನೀರ್ ಗೆ ಟ್ರಂಪ್ ಔತಣಕೂಟ ಏರ್ಪಡಿಸಿದ್ದರು.  ಮುನೀರ್- ಟ್ರಂಪ್ ಭೇಟಿ ಬಗ್ಗೆ ಮೋದಿ ಏಕೆ ಮೌನವಹಿಸಿದ್ರು?   ಚೀನಾ ಪಾಕ್ ಬಗ್ಗೆ ನಾನು ಎಚ್ಚರಿಸಿದ್ರೂ ನಿರ್ಲಕ್ಷಿಸಿ ವಹಿಸಿದರು ಪಾಕ್ ಗೆ ಚೀನಾ ತಾಂತ್ರಿಕವಾಗಿ ಸಹಾಯ ಮಾಡಿದೆ. ಪಾಕ್ ಚೀನಾ ಎದುರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಪಹಲ್ಗಾಮ್ ದಾಳಿ ಬಳಿಕ ನಾವು ಸರ್ಕಾರದ ಜತೆ ಬಂಡೆಯಂತೆ ನಿಂತೆವು.  ಕಾರ್ಯಾಚರಣೆಯಲ್ಲಿ ಸೇನೆಗೆ ಫ‍್ರಿಹ್ಯಾಂಡ್ ಆಗತ್ಯವಿತ್ತು. ನಾನು ಲೆಪ್ಟಿಮೆಂಟ್ ವಿನಯ್ ನರ್ವಾಲ್ ಕುಟುಂಬದ ಜೊತೆ ಮಾತನಾಡಿದ್ದೆ.  ಪಹಲ್ಗಾಮ್ ದಾಳಿ ಬಳಿಕ ವಿಪಕ್ಷಗಳು ಜವಾಬ್ದಾರಿಯಿಂದ ವರ್ತಿಸಿವೆ.

ಈ ಹಿಂದೆ ಯುದ್ದ ವೇಳೆ ಇಂದಿರಗಾಂಧಿ ಪ್ರಿಹ್ಯಾಂಡ್ ಕೊಟ್ಟಿದ್ದರು. ಸೇನೆಗ ಸಂಪೂರ್ಣ ಸ್ವಾತ್ರಂತ್ರ್ಯ ನೀಡಿದ್ದರು. ಆದರೆ  ಇಲ್ಲಿ ಪಾಕಿಸ್ತಾನದ ಮುಂದೆ ಸರ್ಕಾರ ಶರಣಾಗಿದೆ. ಮೋದಿ ಸರ್ಕಾರ ಯುದ್ದದ ವೇಳೇ ಸೇನೆಯ ಕೈಕಟ್ಟಿ ಹಾಕಿದೆ.  ಕನದ ವಿರಾಮಕ್ಕೆ ನಾನೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ. 29 ಬಾರಿ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಮೋದಿ ಅವರು ಏಕೆ ಉತ್ತರಿಸಲಿಲ್ಲ.  ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ನೀವು ಒಪ್ಪಿಕೊಳ್ಳುತ್ತಿರಾ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.vtu

Key words: purpose, Modi image, Operation Sindura, Rahul Gandhi