ಆರ್. ಆರ್ ನಗರ ಮತ್ತು ಶಿರಾ ಉಪ ಚುನಾವಣೆ:  9 ಗಂಟೆವರೆಗೆ ಆದ ಮತದಾನದ ಪ್ರಮಾಣವೆಷ್ಟು ಗೊತ್ತೆ..? ..

ಬೆಂಗಳೂರು,ನವೆಂಬರ್,3,2020(www.justkannada.in):  ಇಂದು ರಾಜ್ಯದ ಎರಡು ಕ್ಷೇತ್ರಗಳಾದ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು  ಈಗಾಗಲೇ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದೆ.jk-logo-justkannada-logo

ಕೊರೋನಾ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದ್ದು ಈ ಮಧ್ಯೆ  9 ಗಂಟೆ ವೇಳೆಗೆ ಆರ್ ಆರ್ ನಗರದಲ್ಲಿ  ಶೇ.7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ  ಶೇ.8.25 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.r-r-nagar-shira-by-election-voting-today

ಎರಡು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್  ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದು, ಆರ್.ಆರ್ ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ನಡುವೆ  ಫೈಟ್ ಏರ್ಪಟ್ಟಿದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಟಿ.ಬಿ ಜಯಚಂದ್ರ ಹಾಗೂ ಬಿಜೆಪಿಯ ಡಾ.ರಾಜೇಶ್ ಗೌಡ ನಡುವೆ  ನೇರಹಣಾಹಣಿ ಇದ್ದು, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಹ ಫೈಟ್ ನೀಡಲಿದ್ದಾರೆ. ಈ ಎರಡು ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

Key words: R.R Nagar – Shira by-election-voting-today