ರವಿಶಾಸ್ತ್ರಿ ಅಪಮಾನ ಮಾಡಿದ್ದ ಘಟನೆ ಮೆಲುಕು ಹಾಕಿದ ಆರ್.ಅಶ್ವಿನ್

ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಟೀಂ ಇಂಡಿಯಾ ಬೌಲರ್ ಆರ್. ಅಶ್ವಿನ್ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವಿನ ವೇಳೆ ರವಿಶಾಸ್ತ್ರಿಯಿಂದ ತನಗಾದ ಅವಮಾನವನ್ನು ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ರವಿಶಾಸ್ತ್ರಿ ಕೋಚ್ ಆಗಿದ್ದಾಗ ಮೂಲೆಗುಂಪು ಮಾಡಲಾಗಿತ್ತು ಎಂಬ ಆರೋಪಕ್ಕೆ ಈ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.

ಟೆಸ್ಟ್ ಸರಣಿ ಗೆಲುವಿನ ಬಳಿಕ ರವಿಶಾಸ್ತ್ರಿ ಅಂದು ಐದು ವಿಕೆಟ್ ಕಿತ್ತ ಕುಲದೀಪ್ ಯಾದವ್ ರನ್ನು ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂದು ಹೊಗಳಿದ್ದರು. ಕುಲದೀಪ್ ಯಾದವ್ ಬಗ್ಗೆ ನನಗೆ ಹೆಮ್ಮೆಯಿತ್ತು.

ಆದರೆ ಆಗ ನನ್ನನ್ನು ನಡೆಸಿಕೊಂಡ ರೀತಿ ತುಂಬಾ ಬೇಸರವುಂಟು ಮಾಡಿತ್ತು. ತಂಡದ ಸೆಲೆಬ್ರೇಷನ್ ಸಂದರ್ಭದಲ್ಲೂ ಬರಬೇಕೆನಿಸಲಿಲ್ಲ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.