ಬೆಂಗಳೂರು,ಮಾರ್ಚ್,2,2026 (www.justkannada.in): ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ಇಲಾಖೆ ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಈಗ ರಾಜ್ಯ ಗುಪ್ತಚರ ಇಲಾಖೆಗೆ ಪೂರ್ಣಾವಧಿ ಕೆಲಸ ಸಿಕ್ಕಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಕೋಮು ಉದ್ವಿಘ್ನತೆ ಹೆಚ್ಚಾಗುತ್ತಿದೆ. ಔಷಧ ಕಾರ್ಖಾನೆಗಳು ಅನಿಯಂತ್ರಿತವಾಗಿ ನಡೆಯುತ್ತಿದೆ. ಈ ಸರ್ಕಾರದ ಪ್ರಮುಖ ಆದ್ಯತೆ ಶಾಸಕರನ್ನು ಎಣಿಸುವುದು. ಡಿಸಿಎಂ ಡಿಕೆ ಶಿವಕುಮಾರ್ ಬಣದ ಭೋಜನ ಹಾಜರಾತಿ ಪತ್ತೆ ಹಚ್ಚುವುದಾಗಿದೆ. ಈವಿಚಾರಕ್ಕೆ ಗುಪ್ತಚರ ಇಲಾಖೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತನಿಖಾ ಸಂಸ್ಥೆ ದುರುಪಯೋಗ ಎನ್ನುವ ರಾಹುಲ್ ಈಗ ಎಲ್ಲಿದ್ದಾರೆ?
ರಾಜ್ಯದ ಯಂತ್ರೋಪಕರಣ ಜನರ ರಕ್ಷಣೆಗಾಗಿ ಇರುವುದು. ನಿಮ್ಮ ಕುರ್ಚಿಯನ್ನು ರಕ್ಷಿಸಲು ಅಲ್ಲ ತನಿಖಾ ಸಂಸ್ಥೆ ದುರುಪಯೋಗ ಎನ್ನುವ ರಾಹುಲ್ ಈಗೆ ಎಲ್ಲಿದ್ದಾರೆ? ಶಸ್ತ್ರೀಕರಣ ಬಗ್ಗೆ ಉಪನ್ಯಾಸ ನೀಡುತ್ತಾರೆ. ಸಿಎಂ ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ಇಲಾಖೆ ದುರುಪಯೋಗ ಮಾಡುವುದುನ್ನ ನಿಲ್ಲಿಸಬೇಕು ಎಂದು ಆರ್ ಅಶೋಕ್ ಹರಿಹಾಯ್ದರು.
Key words: Stop, misusing, intelligence, R. Ashok, CM Siddaramaiah







