ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ತಾರೆ- ಆರ್.ಅಶೋಕ್

ಬೆಳಗಾವಿ,ಅಕ್ಟೋಬರ್,3,2025 (www.justkannada.in):  ಸಿಎಂ ಬದಲಾವಣೆ ಅಧಿಕಾರ ಹಂಚಿಕೆಯ ಮಾತುಕತೆ ಆಗಿರುವುದು ನಿಜ. ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಆರ್.ಅಶೋಕ್,  ಸಿದ್ದರಾಮಯ್ಯ ಅಧಿಕಾರ ಬಿಡುತ್ತಿಲ್ಲ.  ಡಿಕೆ ಶಿವಕುಮಾರ್ ಹಠ ಬಿಡುತ್ತಿಲ್ಲ.  ಸರ್ಕಾರದಲ್ಲಿ ನಾಯಕತ್ವಕ್ಕಾಗಿ ಜಗಳ ಶುರುವಾಗಿದೆ. ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತೀರಾ ಎಂದು ಅಲ್ಲಿನ ನಾಯಕರು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜವಾಬ್ದಾರಿ ಇದ್ದರೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಬೇಕಿತ್ತು. ರಾಜ್ಯದಲ್ಲಿ ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಇದೊಂದು ತುಘಲಕ್ ಸರ್ಕಾರ.  80 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರ ಸಂಘ ಹೇಳಿದೆ. ಲೂಟಿ ಮಾಡುವುದಕ್ಕೆ ಎಲ್ಲಾ ಸಚಿವರು ಕಾದು ನೋಡಿತ್ತಿದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: Siddaramaiah, lose, CM post, December, R. Ashok