ಬೆಂಗಳೂರು,ಆಗಸ್ಟ್,20,2025 (www.justkannada.in): ಸಿಎಂ ಸಿದ್ದರಾಮಯ್ಯ ಬಹಳ ಪ್ರೀತಿಯಿಂದ ಒಳ ಮೀಸಲಾತಿ ಜಾರಿ ಮಾಡಿಲ್ಲ. ವೋಟ್ ಬ್ಯಾಂಕ್ ಗೋಸ್ಕರ ಒಳ ಮೀಸಲಾತಿ ಜಾರಿ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಒಳಮೀಸಲಾತಿ ಜಾರಿ ಬಗ್ಗೆ ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದರು. ನಂತರ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಮೋದಿ ಸಮಯಪ್ರಜ್ಞೆಯಿಂದ ದೇಶಕ್ಕೆ ಒಳ ಮೀಸಲಾತಿ ಸಿಕ್ಕಿದೆ. ಅಂದು ನಮಗೆ ಜೇನುಗೂಡಿಗೆ ಕಲ್ಲುಹೊಡೆದಿದ್ದೀರಾ ಅಂದ್ರು ಇಂದು ಸಿಎಂ ಸಿದ್ದರಾಮಯ್ಯ ಅದೇ ಜೇನುಗೂಡಿಗೆ ಕಲ್ಲು ಹೊಡೆದಿಲ್ಲವಾ? ಆತ್ಮಸಾಕ್ಷಿಯಾಗಿ ಮಾಡಿದ್ದರೆ ಸದನದಿಂದ ಯಾಕೆ ಓಡಿ ಹೋಗಬೇಕಿತ್ತು. ಯಾರೋ ಹೇಳಿದರು ಎಂದು ಒಳ ಮೀಸಲಾತಿ ಜಾರಿ ಮಾಡಿದ್ದೀರಿ ಎಂದು ಆರ್. ಅಶೋಕ್ ಕಿಡಿಕಾರಿದರು.
Key words: CM Siddaramaiah, Vote Bank, internal reservation, R. Ashok