ಬೆಂಗಳೂರು,ಆಗಸ್ಟ್,20,2025 (www.justkannada.in): ರಾಜ್ಯದಲ್ಲಿ ಸರ್ಕಾರವೇ ಸಂಪೂರ್ಣ ವಿಫಲವಾಗಿದ್ದು ಶಾಸಕರು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಆರ್.ಅಶೋಕ್, ನಮ್ಮ ಶಾಸಕರು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರೂ ಸಹ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಮಕ್ಕಳಿಗೆ ಮಾನದಂಡ ಮಾಡ್ತೀರಾ ಅಭಿವೃದ್ದಿಗೆ ಮಾನದಂಡ ಏನು? ಈ ಸರ್ಕಾರವೇ ಫೇಲ್ ಆಗಿದೆ ಎಂದರು.
ಈ ವೇಳೆ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಇದೆ ಎಂದು ಸ್ಪೀಕರ್ ಹೇಳಿದರು. ಆ ಗ್ರೇಶಸ್ ಮಾರ್ಕಸ್ ಪರಮೇಶ್ವರ್ ಗೆ ಕೊಡಲಿ ಎಂದು ಅಶೋಕ್ ಕುಟುಕಿದರು. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತುರತ್ನಗಳನ್ನ ಮಾರುತ್ತಿದ್ದರು. ಈಗ ಬೆಂಗಳೂರಿನ ರಸ್ತೆಗಳಲ್ಲಿ ಜಲ್ಲಿಕಲ್ಲು ಎದ್ದು ಬಂದಿದೆ ಎಂದು ಲೇವಡಿ ಮಾಡಿದರು.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪವಾಗಿದ್ದು ಈ ವೇಳೆ ಮಾತನಾಡಿದ ಆರ್.ಅಶೋಕ್, ಪರಮೇಶ್ವರ್ ಸತ್ಯ ನುಡಿಯುವ ವ್ಯಕ್ತಿ ಬಾಗಲಕೋಟೆ ಬಾದಾಮಿಯಲ್ಲಿ ಬೆಂಕಿ ಆರಿಸೋಕೆ ಹೋಗಿದ್ದರು. ಆದರೆ ಪರಮೇಶ್ವರ್ ಅಲ್ಲಿ ಬೆಂಕಿ ಹಚ್ಚಿ ಬಂದಿದ್ದಾರೆ. ನನ್ನ ಬಳಿಯೂ ದುಡ್ಡಿಲ್ಲ. ಸಿದ್ದರಾಮಯ್ಯ ಬಳಿಯೂ ದುಡ್ಡಿಲ್ಲ ಎಂದಿದ್ದಾರೆ. ಬೆಂಗಳೂರು ನಗರ ಅಭಿವೃದ್ದಿ ವಿಚಾರವಾಗಿ ಡಿಕೆ ಹೇಳಿದ್ದಾರೆ. ಬೆಂಗಳೂರು ನಗರವನ್ನ ಉದ್ದಾರ ಮಾಡಲು ನನ್ನಿಂದ ಮಾತ್ರ ಆಗಲ್ಲ ಪರಮೇಶ್ವರ್ ಬಂದರೂ ಅಭಿವೃದ್ದಿ ಮಾಡಲು ಆಗಲ್ಲ ಎಂದಿದ್ದಾರೆ. ಮನೆ ಒಡೆದು ಹೋಗಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಾ ನಿಮ್ಮ ಶಾಸಕರ ಬಾಯಿಯನ್ನ ನೀವೇ ಮುಚ್ಚಲು ಆಗುತ್ತಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
Key words: government, failed, Session, R. Ashok