ಮೈಸೂರು,ಜುಲೈ,28,2025 (www.justkannada.in): ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಪ್ರಯತ್ನ ಪಡುತ್ತಿದ್ದಾರೆ. ಇಬ್ಬರಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಅಂದು 1999ರಲ್ಲಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಖರ್ಗೆ ಸರಿಯಾದ ಟೈಮ್ ಗೆ ಕಲ್ಲು ಹೊಡೆದಿದ್ದಾರೆ. ಸಿಎಂ ಕುರ್ಚಿಯಲ್ಲಿ ಖರ್ಗೆ ಕುಳಿತುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಪಾಪ ಸತ್ತ ಮೇಲೆ ಎಸ್ ಎಂ ಕೃಷ್ಣ ಅವರ ಹೆಸರು ಹೇಳುತ್ತಾರೆ. ಎಸ್.ಎಂ ಕೃಷ್ಣ ಸತ್ತ ಮೇಲೆ ಖರ್ಗೆ ಟೀಕೆ ಮಾಡುತ್ತಾರೆ ಈ ಮೂಲಕ ಎಸ್ ಎಂ ಕೃಷ್ಣಗೆ ಅಪಮಾನ ಮಾಡುತ್ತಿದ್ದಾರೆ. ರಾಜ್ಯದ ಆದಾಯ ಎಸ್.ಎಂ ಕೃಷ್ಣ ಅವರಿಂದ ಹೆಚ್ಚಾಗಿದೆ. ಅವರ ಪಾಂಚಜನ್ಯ ಯಾತ್ರೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರಿಂದ 10 ಸೀಟ್ ಆದರೂ ಬಂದಿದೆ. ಕೃಷ್ಣ ಅವರು ಇದ್ದಾಗ ಖರ್ಗೆ ಈ ಮಾತು ಹೇಳಬೇಕಿತ್ತು ಎಂದು ಟೀಕಿಸಿದರು.
ಸಿದ್ದರಾಮಯ್ಯ ಇಲ್ಲದಿದ್ದರೆ ಖರ್ಗೆ ನ್ಯಾಚುರಲ್ ಸಿಎಂ ಆಗುತ್ತಿದ್ದರು. ಖರ್ಗೆ ಸರಿಯಾದ ಟೈಮ್ ಗೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್ ನಲ್ಲಿ ಸಿಎಂ ಬದಲಾಗೋದು ನಿಜ. ಸಿಎಂ ಸ್ಥಾನಕ್ಕಾಗಿ ವರ ಕೊಡುವ ದೇವರ ಬಳಿ ಡಿಕೆಶಿ ಹೋಗುತ್ತಿದ್ದಾರೆ. ಡಿಕೆ ಗೆ ಕಂಟಕ ಇರೋದು ಜೆಡಿಎಸ್ ನಿಂದ ಬಂದವರಿಂದ ಎಂದು ಆರ್ ಅಶೋಕ್ ಹೇಳಿದರು.
ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಸಿಎಂ ಕೊಡುಗೇನಾ?
ಮೈಸೂರಿನ ರಿಂಗ್ ರೋಡ್ ಬಳಿ ಡ್ರಗ್ಸ್ ಮಾಫಿಯ ತಲೆ ಎತ್ತಿದೆ. ಆ ಜಾಗ ಕೊಟ್ಟವರು ಯಾರು? ಅಲ್ಲಿ ನಡೆಸುತ್ತಿದ್ದ ಗ್ಯಾರೇಜ್ ಯಾರದ್ದು? ಸಿಎಂ ತವರಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನು ಮಾಡುತ್ತಾ ಇದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ನಮ್ಮಪ್ಪ ಹೆಚ್ಚು ಅಭಿವೃದ್ದಿ ಮಾಡಿದ್ದಾರೆ ಅಂತ ಯತೀಂದ್ರ ಹೇಳಿದರು. ಅವರ ಅಪ್ಪನನ್ನು ಹೊಗಳಿದರು. ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಸಿಎಂ ಕೊಡುಗೇನಾ? ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಮಾಡಿದ್ದಾರೆ. ಈ ಸರ್ಕಾರ ಏನು ಕತ್ತೆ ಕಾಯುತ್ತಿದಯೋ ? ಪೊಲೀಸರು ಪಾಪ ಏನು ಮಾಡೋಕೆ ಆಗದ ಪರಿಸ್ಥಿತಿಯಲ್ಲಿ ಇದ್ದಾರೆ. ಗೃಹ ಇಲಾಖೆ ನಿದ್ದೆ ಮಾಡುತ್ತಿದೆ. ಲೋಕಲ್ ಸಪೋರ್ಟ್ ಇಲ್ಲದೆ ಇದೆಲ್ಲವೂ ನಡೆಯುತ್ತಾ?. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮೈ ಮರೆತಿದೆ. ಖುರ್ಚಿ ಜಗಳದಲ್ಲಿ ಕಾನೂನನ್ನು ಮರೆತಿದ್ದಾರೆ . ಮೈಸೂರಿನಲ್ಲಿ ಡ್ರಗ್ಸ್ ಸಿಗಗುತ್ತೆ ಅಂದರೆ ನೋವಿನ ಸಂಗತಿ. ಡ್ರಗ್ಸ್ ಮಾಫಿಯಾ ತಲೆ ಎತ್ತಿರೋದು ಕೂಡ ಸಿಎಂ ಅವರ ಒಂದು ಸಾಧನೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
ಧರ್ಮಸ್ಥಳ ತಲೆ ಬುರುಡೆ ಶವ ಕೇಸ್ ವಿಚಾರ: ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ.
ಧರ್ಮಸ್ಥಳ ತಲೆ ಬುರುಡೆ ಶವ ಕೇಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಯಾರೋ ಕಾಣದ ಕೈ ಇಲ್ಲಿ ಕೆಲಸ ಮಾಡುತ್ತಿದೆ. ಈ ಕೇಸ್ ಜಟಿಲ ಆಗುತ್ತಿಲ್ಲ, ಜಟಿಲ ಮಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ ಕೇಸ್ ಬ್ಯಾಕ್ ಗ್ರೌಂಡ್ ಹಿಂದೆ ಇರೋದು ಕೇರಳ ಸರ್ಕಾರ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ ಇದೆ. ಇಲ್ಲಿ ಆತ್ಮಹತ್ಯೆ ಆಗಿದೆಯೋ ಕೊಲೆ ಆಗಿದೆಯೋ ಪ್ರಕರಣವನ್ನು ಎಸ್ ಐಟಿಗೆ ವರ್ಗಾವಣೆ ಮಾಡಿದ್ದಾರೆ ನಾನು ಇದನ್ನು ಸ್ವಾಗತ ಮಾಡುತ್ತೇನೆ. ಧರ್ಮಸ್ಥಳದವರು ಕೂಡ ಇದನ್ನು ಸ್ವಾಗತ ಮಾಡಿದ್ದಾರೆ. ಈ ಪ್ರಗತಿಪರರ ಗ್ಯಾಂಗ್ ನಾಳೆ ಎಸ್ ಐಟಿಯನ್ನು ಕೂಡ ಒಪ್ಪಲ್ಲ ಅಂತ ಅನ್ನಿಸುತ್ತಿದೆ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ. ಅವರ ಪರ ರಿಪೋರ್ಟ್ ಕೊಟ್ಟರೆ ಸರಿ ಅಂತ ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ. ಈ ಕುರಿತು ಒಂದು ತಂಡ ಮುಂದೆ ಕಿತಾಪತಿ ಮಾಡಬಹುದು ಎಂದರು.
ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ ಬುರುಡೆ ಬಿಡ್ತಾನೋ ಕಾದು ನೋಡೋಣ. ಈ ಧರ್ಮಸ್ಥಳದ ಸುದ್ದಿ ಕೇರಳದಲ್ಲಿ ಚರ್ಚೆ ಆಗುತ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರ ಬರತ್ತೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಆರ್.ಅಶೋಕ್ ತಿಳಿಸಿದರು.
Key words: Mallikarjun Kharge, will, become, CM, R. Ashok