ಸಿದ್ದರಾಮಯ್ಯ 5ವರ್ಷ ನಾನೇ ಸಿಎಂ ಎಂದಿದ್ದಾರೆ: ಅಂದ್ರೆ ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ- ಆರ್.ಅಶೋಕ್

ಬೆಂಗಳೂರು,ಜುಲೈ,10,2025 (www.justkannada.in):  ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದಿದ್ದಾರೆ ಅಂದ್ರೆ ಡಿಕೆ ಶಿವಕುಮಾರ್ ಗೆ ನಯಾಪೈಸೆ ಬೆಲೆ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಆರ್.ಅಶೋಕ್,  ಡಿಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರವನ್ನ ನಾನೇ  ಅಧಿಕಾರಕ್ಕೆ ತಂದಿದ್ದು ಎಂದಿದ್ದಾರೆ.  ಈಗ ಸಿದ್ದರಾಮಯ್ಯ ನಾನೇ 5 ವರ್ಷ ಸಿಎಂ ಅಂತಾ ಹೇಳುತ್ತಿದ್ದಾರೆ.  ಆದರ ಅರ್ಥ ಡಿಕೆ ಶಿವಕುಮಾರ್ ಗೆ ನಯಾಪೈಸೆ ಬೆಲೆ ಇಲ್ಲ. ಡಿಕೆ ಶಿವಕುಮಾರ್ ಗೆ ಶಾಸಕರರ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ಮೆಸೇಜ್ ನೀಡಿದ್ದಾರೆ ಎಂದು ಟೀಕಿಸಿದರು.

ನಾನೇ 5ವರ್ಷ ಸಿಎಂ ಎಂದು ಹೇಳಲು ನೀವೇ ಕಾಂಗ್ರೆಸ್ ಪಾರ್ಟಿನಾ?  ಅದನ್ನ ಘೋಷಣೆ ಮಾಡಬೇಕಾದವರು ಮಲ್ಲಿಕಾರ್ಜುನ ಖರ್ಗೆ. ಆದರೆ ಖರ್ಗೆ ಒಂದು ದಿನವಾದ್ರೂ ಅವರೇ 5 ವರ್ಷ ಸಿಎಂ ಎಂದಿದ್ದಾರಾ..? ಇದು ಸಿದ್ದರಾಮಯ್ಯನವರ ದೌರ್ಬಲ್ಯ ಎಂದು ಆರ್.ಅಶೋಕ್ ಕುಟುಕಿದರು.vtu

Key words: Siddaramaiah CM, 5 years, DK Shivakumar, R. Ashok