ನಾನು ರೋಡ್ ಮಿನಿಸ್ಟರ್.. ರೋಡ್ ಬಗ್ಗೆ ಮಾತ್ರ ಕೇಳಿ. : ಸಚಿವ ಎಚ್.ಡಿ.ರೇವಣ್ಣ

ಮೈಸೂರು, ಜೂ.29, 2019 : (www.justkannada.in news) ನಾನು ರೋಡ್ ಮಿನಿಸ್ಟರ್. ರೋಡ್ ಗೆ ಸಂಬಂಧಿಸಿದ ವಿಷಯಗಳಿದ್ರೆ ಮಾತ್ರ ಕೇಳಿ. ನೀರಿನ ವಿಚಾರ ಮತ್ತೊಂದು ವಿಚಾರ ನನ್ ಹತ್ರ ಕೇಳ್ಬೇಡಿ.

ಇದು ಕರ್ನಾಟಕ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ನೀಡಿದ ಹೇಳಿಕೆ. ಮೈಸೂರಿನಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು ಪತ್ರಕರ್ತರ ಪ್ರಶ್ನೆಗಳಿಗೆ ಹೇಳಿದಿಷ್ಟು…..

ರೋಡಿನ ವಿಚಾರ ಇದ್ರೆ ಮಾತ್ರ ಹೇಳಿ, ಬೇರೆ ವಿಚಾರ ನನ್ ಹತ್ರ ಕೇಳ್ಬೇಡಿ. ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುವ ಬಗ್ಗೆ ನಂಗೆ ಗೊತ್ತಿಲ್ಲ , ಅದನ್ನೆಲ್ಲ ನೋಡ್ಕೊಳೋದಕ್ಕೆ ಪಕ್ಷದ ಹೈ ಕಮಾಂಡ್ ಇದೆ. ಪಾದಯಾತ್ರೆ ವಿಚಾರ ನಂಗೆ ಗೊತ್ತಿಲ್ಲ,
ಯಾವ್ ಲೆಕ್ಕನೂ ಇಲ್ಲಾ, ಅಂಕಿನು ಇಲ್ಲ . ಮೈತ್ರಿ ಸರ್ಕಾರ ಐದು ವರ್ಷ ಸುಭದ್ರ. ಕೆಲವರು ಮಧ್ಯಂತರ ಚುನಾವಣೆ ಬರುತ್ತೆ ಅಂತಾರೆ ..ರೀ ಅದು ಸಾಧ್ಯನಾ..?? ಇದರಲ್ಲಿ ಯಾವ್ದೆ ಡೌಟ್ ಬೇಡ, ಮುಖ್ಯ ಮಂತ್ರಿಯಾಗಿ ಕುಮಾರಸ್ವಾಮಿ 5ವರ್ಷ ಪೂರೈಸುತ್ತಾರೆ ಮೈಸೂರಿನಲ್ಲಿ ಸಚಿವ ಹೆಚ್ ಡಿ ರೇವಣ್ಣ ಸ್ಪಷ್ಟನೆ

ನಂಗ್ಯಾವ ಪವರ್ ಇದೆ ? ಯಾರಿಗೆ ಪವರ್ ಇದೆ ಅಂತ ಎಲ್ಲರಿಗೂ ಗೊತ್ತು. ನಾನು ಪವರ್ ಫುಲ್ ಅಲ್ಲ.
ನಾನಗಲಿ, ಜಿ.ಟಿ.ದೇವೇಗೌಡರಾಗಲಿ ಪವರ್ ಫುಲ್ ಅಲ್ಲ. ನಮಗ್ಯಾವ ಪವರ್ ಇದೆ. ಮೈಸೂರಿನಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾರ್ಮಿಕ ನುಡಿ.
ನೀರಿನ ವಿಚಾರ, ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ಅದಕ್ಕಾಗಿಯೇ ಜಲ ಸಂಪನ್ಮೂಲ ಸಚಿವರು, ನೀರಾವರಿ ಸಚಿವರು ಇದ್ದಾರೆ. ಆ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಮೈಸೂರಿನಲ್ಲಿ ಹೆಚ್.ಡಿ.ರೇವಣ್ಣ ಹೇಳಿಕೆ

ನನ್ನ ಮಗನ ಬಗ್ಗೆ ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸೋಕೆ ಆಗೋಲ್ಲ. ಅವರೋಬ್ಬ ರಾಜ್ಯದ ಸಂಸದೀಯ ಪಟುವಾಗಿ ಅವರ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ಯದಲ್ಲಿರುವ ಸರ್ಕಾರವನ್ನ ಭ್ರಷ್ಟ ಎಂದಾಗ ಕೇಳಿಸಿಕೊಂಡು ಸುಮ್ಮನಿರೋಕೆ ಆಗುತ್ತಾ? ಪ್ರಜ್ವಲ್ ಅವರು ಲೋಕಸಭೆಯಲ್ಲಿ 2 ಟಿಎಂಸಿ ನೀರು ಬಿಡಿ ಅಂತ ಕೇಳಿದ್ದಾರೆ.
ರಾಜ್ಯದ ಸಮಸ್ಯೆಗಳನ್ನ ಲೋಕಸಭೆಯಲ್ಲಿ ಚರ್ಚಿಸಿದ್ದಾರೆ. ಮಗ ಲೋಕಸಭೆಯಲ್ಲಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಹೆಚ್.ಡಿ.ರೇವಣ್ಣ.

———–

key words : pwd-minister-h.d.revanna-mysore-press.meet