ರಂಗೇರಿದ ಪಂಜಾಬ್ ವಿಧಾನಸಭೆ ಚುನಾವಣಾ ಕಣ: ನಿರ್ಭೀತಿಯಿಂದ ಉತ್ತರಿಸುವವರಿಗೆ ಮತಹಾಕಿ ಎಂದ ರಾಹುಲ್ ಗಾಂಧಿ

0
1

ಬೆಂಗಳೂರು, ಫೆಬ್ರವರಿ 20, 2022 (www.justkannaa.in): ನಿರ್ಭೀತಿಯಿಂದ ಉತ್ತರಿಸುವವರಿಗೆ ಮತ ನೀಡಿ ಎಂದು ಪಂಜಾಬ್ ಮತದಾರರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂದು ಏಕಹಂತದಲ್ಲಿ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ನಡುವೆ ಮಾತನಾಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ನಿರ್ಭೀತಿಯಿಂದ ಉತ್ತರಿಸುವವರಿಗೆ ಮತ ನೀಡಿ ಎಂದು ಪಂಜಾಬ್ ಜನರಿಗೆ ಸಲಹೆ ನೀಡಿದ್ದಾರೆ.

ರಾಜ್ಯದ ಜನತೆ ನಿಮಗೆ ಬೆಂಬಲ ನೀಡುವ ಮತ್ತು ನಿಮಗೆ ನಿರ್ಭೀತಿಯಿಂದ ಉತ್ತರ ನೀಡುವ ಅಭ್ಯರ್ಥಿಗಳಿಗೆ ಮತ ಹಾಕಿ. ಇದು ರಾಜ್ಯದ ಜನಕ್ಕೆ ಹಾಗೂ ಪ್ರಗತಿಯತ್ತ ಹೆಜ್ಜೆ ಹಾಕಲು ನೆರವಾಗುತ್ತದೆ ಎಂದಿದ್ದಾರೆ.