ಮೆರವಣಿಗೆಯಲ್ಲಿ ನಟ ದಿ.ಅಪ್ಪು ಫೋಟೊ ತೆಗಿಸಿದ್ದೇ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆಗೆ ಕಾರಣವಾಯ್ತಾ..?

ಮೈಸೂರು,ಜುಲೈ,10,2023(www.justkannada.in): ತಿ.ನರಸೀಪುರದಲ್ಲಿ ಯುವಬ್ರಿಗೇಡ್  ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯವೊಂದು ವ್ಯಕ್ತವಾಗಿದೆ.

ಹೌದು,  ಹನುಮ ಜಯಂತಿ ಮೆರವಣಿಗೆ ವೇಳೆ ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೇ ವೇಣುಗೋಪಾಲ್  ಹತ್ಯೆಗೆ  ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.

ಮೊನ್ನೆ ಟಿ.ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿತ್ತು. ಈ ವೇಳೆ ವ್ಯಾನ್ ನಲ್ಲಿ ಭಾರತ ಮಾತೇ ಪೋಟೊ ಮುಂದೆ‌ ನಟ ದಿ. ಪುನೀತ್ ರಾಜ್ ಕುಮಾರ್ ಪೋಟೋ ಹಾಕಿದ್ದರು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಲ್ಲಿ ಯಾವ ವ್ಯಕ್ತಿಯ ಪೋಟೋ ಹಾಕೋದು ಬೇಡ ಎಂದು ಕೊಲೆಯಾದ ವೇಣುಗೋಪಾಲ್‌ ತೆಗೆಸಿದ್ದರು.

ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೆ ಗಲಾಟೆಯಾಗಿತ್ತು. ನಂತರ ನಿನ್ನೆ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ಕೊಲೆ‌ ಮಾಡಾಲಾಗಿದೆ ಎಂದು ಹತ್ಯೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮ ಹೇಳಿಕೆ ನೀಡಿದ್ದಾರೆ.

Key words: Punith rajkumar -photo – young brigade –activist-murder-T.Narsipur